ಕರ್ನಾಟಕ

karnataka

ETV Bharat / state

ಲಿವಿಂಗ್​ ಟು ಗೆದರ್​ನಲ್ಲಿ ಮಗುವಿಗೆ ಜನ್ಮ.. ಕರುಳಕುಡಿ ಸಾಕಲು ಹೆತ್ತವರ ನಿರ್ಲಕ್ಷ್ಯ..? - ಕೊಳ್ಳೇಗಾಲದ ಜೀವನ ಜ್ಯೋತಿ ಟ್ರಸ್ಟ್​​​ನ ದತ್ತು ಕೇಂದ್ರ

21 ವರ್ಷದ ಹುಡುಗ -ಹುಡುಗಿ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರಸ್ಪರ ಪ್ರೇಮಿಸಿ ಒಂದಷ್ಟು ದಿನ ಒಂದೇ ಮನೆಯಲ್ಲಿದ್ದರು. ಇದರ ಪರಿಣಾಮ ಗಂಡು‌ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಕಾರಣಾಂತರಗಳಿಂದ ಇಬ್ಬರಿಗೂ ಮಗು‌ ಬೇಡವಾಗಿದ್ದು, 11 ದಿನಗಳ ಹಸುಗೂಸನ್ನು ತೊರೆಯಲು ಮುಂದಾಗಿದ್ದರು.

ಮಗು ಸಾಕಲು ಹೆತ್ತವರ ನಿರ್ಲಕ್ಷ್ಯ..?
ಮಗು ಸಾಕಲು ಹೆತ್ತವರ ನಿರ್ಲಕ್ಷ್ಯ..?

By

Published : Jun 3, 2021, 9:48 PM IST

ಕೊಳ್ಳೇಗಾಲ (ಚಾಮರಾಜನಗರ): ಲಿವಿಂಗ್ ಟು ಗೆದರ್​​ನಲ್ಲಿದ್ದ 21 ವರ್ಷದ ಹುಡುಗ - ಹುಡುಗಿಯು ಮಗುವಿನ ಜನನಕ್ಕೆ ಕಾರಣರಾಗಿದ್ದು, ಇದೀಗ ತಮ್ಮ 11 ದಿನದ ಹಸುಗೂಸನ್ನು ಅನಾಥವನ್ನಾಗಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೆತ್ತವರಿಬ್ಬರಿಗೂ ಮಗು ಬೇಡವಾದ ಕಾರಣ ಈಗ ಕೊಳ್ಳೇಗಾಲ ಜೀವನ ಜ್ಯೋತಿ ಟ್ರಸ್ಟ್​​ನಲ್ಲಿ ಆಶ್ರಯ ಪಡೆದಿದೆ.

ಹೌದು.. ಇಂತಹ ಅಮಾನವೀಯ ಘಟನೆಯೊಂದು ಮೈಸೂರು ನಗರದಲ್ಲಿ ಜರುಗಿದೆ. ಪ್ರೇಮಿಗಳಿಬ್ಬರು ಕಾಲೇಜಿನಲ್ಲಿ ಪರಸ್ಪರ ಪ್ರೀತಿಸಿ ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್​ನಲ್ಲಿದ್ದು, ಮಗು ಮಾಡಿಕೊಂಡಿದ್ದಾರೆ. ಬಳಿಕ ಇಬ್ಬರಿಗೂ ಮಗು ಬೇಡ ಎಂದು ನಿರಾಕರಿಸಿದ್ದು, ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಘಟನೆ ವಿವರ

21 ವರ್ಷದ ಹುಡುಗ - ಹುಡುಗಿ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರಸ್ಪರ ಪ್ರೇಮಿಸಿ ಒಂದಷ್ಟು ಒಂದೇ ಮನೆಯಲ್ಲಿದ್ದರಿಂದ ಗಂಡು‌ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಕಾರಣಾಂತರಗಳಿಂದ ಇಬ್ಬರಿಗೂ ಮಗು‌ ಬೇಡವಾಗಿದೆ. ಹೀಗಾಗಿ ಮಗು ಹುಟ್ಟಿದ 11 ದಿನಗಳ ಹಸುಗೂಸನ್ನು ತೊರೆಯಲು ಮುಂದಾಗಿದ್ದರು.

ಇಬ್ಬರ ನಡುವಿನ ಜಗಳದಿಂದಾಗಿ ವಿವಾದ ಮೈಸೂರಿನ ಠಾಣೆ ಮೆಟ್ಟಿಲೇರಿತ್ತು. ಬಳಿಕ ಈ ವಿಚಾರ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿದಿದ್ದು, ಠಾಣೆಗೆ ಪೋಷಕರನ್ನು ಕರೆದು ಮಾತನಾಡಿದ್ದಾರೆ. ಆದರೆ, ಇಬ್ಬರೂ ಮಗು ಬೇಡ ಎಂದು ನಿರಾಕರಿಸಿದ್ದಾರೆ. ಮೇ 19 ರಂದು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯು ಕೊಳ್ಳೇಗಾಲದ ಜೀವನ ಜ್ಯೋತಿ ಟ್ರಸ್ಟ್​​​ನ ದತ್ತು ಕೇಂದ್ರಕ್ಕೆ ನೀಡಿದೆ. ಮಗುವನ್ನು ಮರಳಿ ಪಡೆಯಲು ಪೋಷಕರಿಗೆ 60 ದಿನಗಳ ಕಾಲಾವಕಾಶ ನೀಡಿದೆ.

‘ಮಗುವು ಬೇಡ, ಮದುವೆಯೂ ಬೇಡ’

ಪೊಲೀಸರು‌ ಹಾಗೂ ಮಕ್ಕಳ‌ ಕಲ್ಯಾಣ ಸಮಿತಿಯು ಕಾನೂನಿನ ಪ್ರಕಾರ ಇಬ್ಬರಿಗೂ ಮದುವೆಯಾಗಲು ಅರ್ಹ ವಯಸ್ಸಿದೆ ಇಬ್ಬರೂ ಮದುವೆಯಾಗಬಹುದಲ್ಲ ಎಂಬ ಸಲಹೆ ನೀಡಿದ್ದಾರೆ. ಆದರೆ, ಇಬ್ಬರೂ ಮನೆಯಲ್ಲಿ ಒಪ್ಪುವುದಿಲ್ಲ ಎಂದು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಆರೂಷ್ ಎಂದು ನಾಮಕರಣ

ಜೀವನಜ್ಯೋತಿ ಟ್ರಸ್ಟ್​​ನಲ್ಲಿ ಮಗು ಆಶ್ರಯ ಪಡೆದುಕೊಂಡಿದೆ. ಮಗವಿನ ಆರೋಗ್ಯ ಉತ್ತಮವಾಗಿದ್ದು, ಆರೂಷ್ ಎಂದು ನಾಮಕರಣ ಮಾಡಲಾಗಿದೆ.

ಈ ಬಗ್ಗೆ ಜೀವನ್ ಜ್ಯೋತಿ ಟ್ರಸ್ಟ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್ ಕರಿಯಪ್ಪ ಪ್ರತಿಕ್ರಿಯಿಸಿದ್ದು, ಮೇ 19 ರಂದು ಮಕ್ಕಳ ಕಲ್ಯಾಣ ಸಮಿತಿ ನಮ್ಮ ಟ್ರಸ್ಟ್​​​​ಗೆ ಗಂಡು ಮಗುವೊಂದನ್ನು ಹಸ್ತಾಂತರ ಮಾಡಿದೆ. ಮಗುವಿನ ಪಾಲನೆ ಮಾಡಲಾಗುತ್ತಿದೆ. ಒಂದು ವೇಳೆ, ನಿಯಮದಂತೆ 60 ದಿನದೊಳಗೆ ಮಗುಬೇಕೆಂದು ಬಯಸಿದರೆ ಹೆತ್ತವರು ಸಮಿತಿ ಮೂಲಕ ಅನುಮತಿ ಪಡೆದು ಮಗು ಕರೆದೊಯ್ಯಲು ಅವಕಾಶವಿದೆ. ಇಲ್ಲದಿದ್ದರೆ ದತ್ತು ಪ್ರಕ್ರಿಯೆ ನಡೆಸಲಾಗುತ್ತದೆ. ಮಗುವಿನ ಆರೋಗ್ಯ ಸ್ಥಿರವಾಗಿದ್ದು ಪೂರಕ ಲಾಲನೆ, ಪೋಷಣೆ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details