ಚಾಮರಾಜನಗರ:ಪವಿತ್ರಯಾತ್ರಾ ಕ್ಷೇತ್ರವಾದ ಮಲೆಮಹದೇಶ್ವರನ ಬೆಟ್ಟದಲ್ಲಿನ ಹುಂಡಿ ಎಣಿಕೆ ಆದಾಯ ವಿಶೇಷಾಚರಣೆಗಳ ಹಿಂದಿನ ದಾಖಲೆಗಳನ್ನು ಸರಿಗಟ್ಟಿದೆ.
ಶುಕ್ರವಾರ ನಡೆದ ಹುಂಡಿ ಎಣಿಕೆಯಲ್ಲಿ ಬರೋಬ್ಬರಿ ₹ 1,88,21,108 ಸಂಗ್ರಹವಾಗಿದ್ದು, ಧನುರ್ಮಾಸ ಅವಧಿಯಲ್ಲಿ ಸಂಗ್ರಹಗೊಂಡ ಅತ್ಯಧಿಕ ಮೊತ್ತ ಇದಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ತಿಳಿಸಿದ್ದಾರೆ.