ಚಾಮರಾಜನಗರ: ರಸ್ತೆಯಲ್ಲಿ 10 ರೂ. ಬಿದ್ದಿದ್ದರೇ ಎಗರಿಸುವ ಈ ದಿನಮಾನದಲ್ಲಿ ಬರೋಬ್ಬರಿ 100 ಗ್ರಾಂ ಚಿನ್ನದ ಸರ ಮರಳಿಸಿ ನೌಕರ ಪ್ರಾಮಾಣಿಕತೆ ಮೆರೆದಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಮೈಸೂರಿನ ಸಾಫ್ಟ್‌ವೇರ್ ಇಂಜಿನಿಯರ್ ಎಂ.ರಾಜಶೇಖರ ಎಂಬವರ ಪತ್ನಿ ಸರವನ್ನು ಮರಳಿ ಪಡೆದಿದ್ದು, ಪ್ರಾಧಿಕಾರದ ನೌಕರ ಕೃಷ್ಣಮೂರ್ತಿ ಮಾಂಗಲ್ಯ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಳೆದ 3 ರಂದು ಬೆಟ್ಟಕ್ಕೆ ಬಂದಿದ್ದ ಟೆಕ್ಕಿ ಕುಟುಂಬ ಜೇನುಮಲೆ ವಸತಿಗೃಹದಲ್ಲಿ ತಂಗಿದ್ದರು. ದೇವರ ದರ್ಶನ ಮುಗಿಸಿ ಕೊಠಡಿ ಖಾಲಿ ಮಾಡಿ ತೆರಳುವಾಗ ಮಾಂಗಲ್ಯ ಸರ ಬೀಳಿಸಿಕೊಂಡು ಹೋಗಿದ್ದಾರೆ. ಬಳಿಕ ಸರವು ರಿಸೆಪ್ಶನಿಸ್ಟ್ ಸಿಕ್ಕಿ ಕೊಠಡಿ ಕೊಡುವಾಗ ನೀಡಿದ್ದ ದೂರವಾಣಿ ಸಂಪರ್ಕದಿಂದ ಟೆಕ್ಕಿಯನ್ನು ಪತ್ತೆಹಚ್ಚಿ ಮಾಂಗಲ್ಯ ಸರವನ್ನು ಹಿಂತಿರುಗಿಸಿದ್ದಾರೆ.