ಚಾಮರಾಜನಗರ: ಜಿಲ್ಲಾದ್ಯಂತ ಈಗಾಗಲೇ ಇರುವ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಒಟ್ಟು 2006 ಹಾಸಿಗೆ ಸಾಮರ್ಥ್ಯವಿದೆ. ಆದರೆ, ಕೇವಲ 400 ಮಂದಿಯಷ್ಟೇ ಇದ್ದು, ಹೋಂ ಐಸೋಲೇಷನ್ ನಲ್ಲಿ 3,842 ಸೋಂಕಿತರಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಕೋವಿಡ್ ನಿರ್ವಹಣೆಯ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಬಳಿಕ ಅವರು ಮಾತನಾಡಿ, ನಗರ ಪ್ರದೇಶವೂ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹೋಂ ಐಸೋಲೇಷನ್ ನಲ್ಲಿರಲು ಸೂಕ್ತ ವ್ಯವಸ್ಥೆ ಇಲ್ಲ. ಹೋಂ ಐಸೋಲೇಷನ್ನಲ್ಲಿರುವವರಿಂದಲೇ ಸೋಂಕು ಹೆಚ್ಚಾಗುತ್ತಿರುವುದರಿಂದ, ಸೌಲಭ್ಯ ಇಲ್ಲದಿದ್ದರೂ ಹೋಂ ಐಸೋಲೇಷನ್ ಆಗಿರುವವರ ಪತ್ತೆಗೆ ತಹಶೀಲ್ದಾರ್, ಟಿಎಚ್ಒ ಸೇರಿದಂತೆ ತಂಡ ರಚಿಸಲಾಗಿದ್ದು, ಇನ್ನೆರೆಡು ದಿನಗಳಲ್ಲಿ ಸಮೀಕ್ಷೆ ನಡೆಸಿ ಅವೈಜ್ಞಾನಿಕವಾಗಿ ಹೋಂ ಐಸೋಲೇಷನ್ನಲ್ಲಿ ಇರುವವರನ್ನು ಕೇರ್ ಸೆಂಟರಿಗೆ ದಾಖಲಿಸಲಾಗುತ್ತದೆ ಎಂದು ವಿವರಿಸಿದರು.