ಕರ್ನಾಟಕ

karnataka

ETV Bharat / state

ಕೊರೊನಾ ನಿಯಂತ್ರಣ, ಆಕ್ಸಿಜನ್ ನಿರ್ವಹಣೆಗೆ ಟಾಸ್ಕ್​​​​​ಫೋರ್ಸ್ ರಚನೆ: ಸಚಿವ ಸುರೇಶ್ ಕುಮಾರ್ - ಕರ್ನಾಟಕ ಕೊರೊನಾ

ಗ್ರಾಮೀಣ ಭಾಗದಲ್ಲೇ ಹೆಚ್ಚು ಕೊರೊನಾ ಸೋಂಕು ಹರಡುತ್ತಿರುವುದರಿಂದ ಹಳ್ಳಿಗರಿಗೆ ಹೋಂ ಐಸೋಲೇಷನ್​ ಬದಲು ಕೋವಿಡ್ ಕೇರ್ ಸೆಂಟರ್​​ಗೆ ದಾಖಲಿಸಲಾಗುವುದು. ಹಾಗಾಗಿ, ರಾಣಿ ಚೆನ್ನಮ್ಮ, ಮೊರಾರ್ಜಿ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದಿದ್ದಾರೆ.

Suresh kumar
ಸಚಿವ ಸುರೇಶ್ ಕುಮಾರ್

By

Published : May 6, 2021, 3:40 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಆಮ್ಲಜನಕ ಸಮರ್ಪಕ ನಿರ್ವಹಣೆಗೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಾಸಕರೊಂದಿಗೆ ಕೋವಿಡ್ ನಿರ್ವಹಣಾ ಸಭೆ ನಡೆಸಿ ಬಳಿಕ ಮಾತನಾಡಿ, ನನ್ನ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ಇರಲಿದ್ದು, ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್‌ ರಚನೆಯಾಗಿದ್ದು, ಇಂದು ಗುಂಡ್ಲುಪೇಟೆಯಲ್ಲಿ ನಾಳೆ ಕೊಳ್ಳೇಗಾಲದಲ್ಲಿ ಸಭೆ ನಡೆಯಲಿದೆ. ನಾನು ಸಹ ಜಿಲ್ಲೆಯ ಎಲ್ಲಾ ಕೋವಿಡ್ ಕೇರ್ ಸೆಂಟರ್​​ಗೆ ಭೇಟಿ ನೀಡುತ್ತೇನೆ ಎಂದರು.

ಕೋವಿಡ್ ನಿರ್ವಹಣಾ ಸಭೆ ನಡೆಸಿ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್

ಆಮ್ಲಜನಕ ನಿರ್ವಹಣೆಗಾಗಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಕೊರತೆ ನೀಗಿಸಲು ಮತ್ತು ನಿರ್ವಹಣೆಗಾಗಿ ಬಿಆರ್​​​ಟಿಡಿಸಿಎಫ್ ಸಂತೋಷ್ ಅವರನ್ನು ನೇಮಿಸಲಾಗಿದೆ. ಹೋಂ ಐಸೋಲೇಷನ್ ನಲ್ಲಿರುವವರ ಮತ್ತು ವ್ಯಾಕ್ಸಿನ್ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೋಂ ಐಸೋಲೇಷನ್​ಗೆ ಕಡಿವಾಣ

ಗ್ರಾಮೀಣ ಭಾಗದಲ್ಲೇ ಹೆಚ್ಚು ಕೊರೊನಾ ಸೋಂಕು ಹರಡುತ್ತಿರುವುದರಿಂದ ಹಳ್ಳಿಗರಿಗೆ ಹೋಂ ಐಸೋಲೇಷನ್​ ಬದಲು ಕೋವಿಡ್ ಕೇರ್ ಸೆಂಟರ್​​ಗೆ ದಾಖಲಿಸಲಾಗುವುದು. ಹಾಗಾಗಿ, ರಾಣಿ ಚೆನ್ನಮ್ಮ, ಮೊರಾರ್ಜಿ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದರು.

ಇದೇ ವೇಳೆ, ಕ್ಲೋಸ್ ಡೌನ್ ವಿಫಲವಾಗಿರುವ ಕುರಿತು ಪ್ರತಿಕ್ರಿಯಿಸಿ, ಕ್ಲೋಸ್ ಡೌನ್ ವಿಫಲವಾಗಿದೆ ಎನ್ನಲಾಗುವುದಿಲ್ಲ, ಜನರು ಗಂಭೀರತೆ ಮರೆತ್ತಿದ್ದಾರೆ. ಕ್ಲೋಸ್ ಡೌನ್ ಬಗ್ಗೆ ರಾಜ್ಯ ಸರ್ಕಾರ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details