ಚಾಮರಾಜನಗರ:ಕಳೆದ ಎರಡು ದಿನಗಳಿಂದ ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ತಂಗಿರುವ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾನುವಾರ ಇಡೀ ದಿನ ಮಲೆಮಹದೇಶ್ವರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಧ್ಯಾನ, ಪೂಜೆ ನಡೆಸಿದರು.
ಪಾಲಾರ್ ನದಿಯಲ್ಲಿ ಸಾಲೂರು ಮಠದ ಸ್ವಾಮೀಜಿ ಸೇರಿದಂತೆ ಇನ್ನಿತರ ಮಠಾಧೀಶರು ಸ್ನಾನ ಮಾಡಿದರು. ನದಿ ದಂಡೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ, ಧ್ಯಾನ ಮಾಡಿದರು. ಜೊತೆಗೆ, ಹೊಗೆನಕಲ್ ಜಲಪಾತಕ್ಕೆ ತೆರಳಿದ ಅವರು ತೆಪ್ಪದ ಮೂಲಕ ಜಲಾಶಯದ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ.
ಪಾಲಾರ್ ನದಿಯಲ್ಲಿ ಸುತ್ತೂರು ಶ್ರೀ ಸ್ನಾನ- ದಂಡೆಯಲ್ಲಿ ಧ್ಯಾನ ಓದಿ:ಪಂಚಭೂತಗಳಲ್ಲಿ ಲೀನವಾದ ನೈಟಿಂಗೇಲ್ ಆಫ್ ಇಂಡಿಯಾ
ಹೊಗೆನಕಲ್ ಫಾಲ್ಸ್ನ ಅಭಿವೃದ್ಧಿಯ ಬಗ್ಗೆ ಡಿಎಫ್ಒ ಏಡುಕುಂಡಲು ಅವರಿಂದ ಮಾಹಿತಿ ಪಡೆದ ಸ್ವಾಮೀಜಿ, ಆಗಮಿಸುವ ಮಾದಪ್ಪನ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡಲು ಕ್ರಮವಹಿಸಬೇಕು. ಜಲಪಾತಕ್ಕೆ ಪ್ರವಾಸಿಗರನ್ನು ಸೆಳೆಯಬೇಕು. ಮತ್ತಷ್ಟು ಅಭಿವೃದ್ಧಿಯಾಗಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಾಲಾರ್ ನದಿಯಲ್ಲಿ ಸುತ್ತೂರು ಶ್ರೀ ಸ್ನಾನ- ದಂಡೆಯಲ್ಲಿ ಧ್ಯಾನ ಮಲೆಮಹದೇಶ್ವರಬೆಟ್ಟಕ್ಕೆ ಕಾವೇರಿ ನೀರು ಸರಬರಾಜಾಗುವ ಜಾಕ್ವೆಲ್ ಘಟಕ, ಜುಂಜೇಗೌಡರು ಪೂಜಿಸುತ್ತಿದ್ದ ರಂಗನಾಥ ದೇವಾಲಯ, ಮಹದೇಶ್ವರರು ಹುಲಿವಾಹನವೇರಿ ನಾಟ್ಯವಾಡಿದ ಐತಿಹ್ಯವಿರುವ ಕಾಡಿನ ಮಧ್ಯ ಭಾಗದಲ್ಲಿನ ಪಾದದರೆ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಲಹೆ ನೀಡಿದರು.