ಚಾಮರಾಜನಗರ: ಬೆಳ್ಳಂಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್ ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಅಭಿವೃದ್ಧಿ ಕುರಿತು ಚರ್ಚಿಸಿದರು.
ಭರಚುಕ್ಕಿಯನ್ನು ಉತ್ತಮ ಪ್ರವಾಸಿ ಕೇಂದ್ರವನ್ನಾಗಿಸಲು ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ತಯಾರಿಸಿರುವ ಮಾಸ್ಟರ್ ಪ್ಲಾನ್ ಕುರಿತು ಮಾಹಿತಿ ಪಡೆದರು. ಮೊದಲನೇ ಹಂತದಲ್ಲಿ ಆ್ಯಂಪಿ ಥಿಯೇಟರ್, ಫುಡ್ ಕೋರ್ಟ್, ಸ್ವಾಗತ ಕಮಾನು, ಇಂಟೆಲಿಜೆನ್ಸ್ ಕಣ್ಗಾವಲು ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಡಿಸೆಂಬರ್ ನಲ್ಲಿ ಭೂಮಿ ಪೂಜೆ ನೆರವೇರಿಸುವ ಭರವಸೆ ನೀಡಿದರು. ಮಧ್ಯಾಹ್ನ ಇಲಾಖೆ ಅಧಿಕಾರಿಗಳೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ, ಭರಚುಕ್ಕಿಯಲ್ಲಿ ಜಲಪಾತೋತ್ಸವ ಕುರಿತು ಸಭೆ ನಡೆಸಲಿದ್ದಾರೆ.
ಈಟಿವಿ ಭಾರತ ಭಾನುವಾರವಷ್ಟೇ ‘ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಿದ್ಧತೆ, ಭರಚುಕ್ಕಿಯಲ್ಲಿ ಯಾವಾಗ ಆ ವೈಭವ’ ಎಂಬ ವರದಿ ಬಿತ್ತರಿಸಿ ಸಚಿವರು ಮತ್ತು ಜಿಲ್ಲಾಡಳಿತದ ಗಮನ ಸೆಳೆದಿತ್ತು. ಇದರ ಫಲವಾಗಿ ಇಂದು ಸಚಿವ ಸುರೇಶಕುಮಾರ್ ಭೇಟಿ ನೀಡಿ ಜಲಪಾತೊತ್ಸವದ ಸಭೆ ನಡೆಸಲಿದ್ದಾರೆ.