ಚಾಮರಾಜನಗರ: ಸೋಂಕಿತ ಪೊಲೀಸ್ ಪೇದೆ ವರದಿಯಲ್ಲಿ ಗೊಂದಲ ಮೂಡಿರುವ ಹಿನ್ನೆಲೆ ಮತ್ತೊಮ್ಮೆ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪೇದೆ ವರದಿ ಗೊಂದಲ: ಮಧ್ಯಾಹ್ನ 3 ಕ್ಕೆ ಬರಲಿದೆಯಂತೆ ನಿಖರ ಮಾಹಿತಿ
ಸೋಂಕಿತ ಪೊಲೀಸ್ ಪೇದೆ ವರದಿಯಲ್ಲಿ ಗೊಂದಲವರುವ ಕಾರಣ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ಮತ್ತೊಮ್ಮೆ ಲ್ಯಾಬ್ ಟೆಸ್ಟ್ಗೆ ಕಳಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪೇದೆ ವರದಿ ಗೊಂದಲ
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪೇದೆಯ ವರದಿ ಗೊಂದಲ ಮೂಡಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಅವರ ಗಂಟಲು ದ್ರವ ಪರೀಕ್ಷೆಗೆ ರವಾನಿಸಿದ್ದು ಮಧ್ಯಾಹ್ನ 3 ರ ವೇಳೆಗೆ ಅದರ ಫಲಿತಾಂಶದ ವರದಿ ಬರಲಿದ್ದು, ನಾನು ಅದನ್ನು ಎದುರು ನೋಡುತ್ತಿದ್ದೇನೆ ಎಂದರು.
ಇನ್ನು, ಸರ್ಕಾರ ಈಗಾಗಲೇ ನೇಕಾರರಿಗೆ, ಕ್ಷೌರಿಕ, ಮಡಿವಾಳ ಹಾಗೂ ಹೂ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಲಾಕ್ಡೌನ್ನಿಂದ ತೊಂದರೆಗೀಡಾಗಿದ್ದ ಕುಟುಂಬಗಳಿಗೆ ಇದರಿಂದ ನೆರವು ಸಿಗಲಿದೆ ಎಂದರು.