ಕರ್ನಾಟಕ

karnataka

ETV Bharat / state

ಕನ್ನಡದ ವಿರುದ್ಧ ಮಾತನಾಡಿದರೆ ಸಹಿಸುವುದಿಲ್ಲ: ಸುರೇಶ್​ ಕುಮಾರ್ - ಎಂಇಎಸ್‌ ಪಕ್ಷ

ಬೆಳಗಾವಿಯ‌ ವಿಚಾರದಲ್ಲಿ ಕನ್ನಡದ ವಿರುದ್ಧ, ಭಾಷೆ ಹಾಗೂ ಕನ್ನಡ ಅಸ್ಮಿತೆಯ ವಿರುದ್ಧ ಮಾತನಾಡಿದರೆ ಯಾರೂ ಸಹಿಸುವುದಿಲ್ಲ. ಎಂಇಎಸ್ ಪಕ್ಷ ಹಳೇಯ ಕಾಲದಲ್ಲಿಯೇ ಇದೆ. ಅವರ ಉದ್ಧಟತನವನ್ನ ಬೆಳಗಾವಿಯ ಯುವ ಜನತೆ ಸಹಿಸುವುದಿಲ್ಲ ಎಂದು ರಮೇಶ್​ ಕುಮಾರ್​ ಹೇಳಿದರು.

Suresh Kumar
ಸುರೇಶ್​ ಕುಮಾರ್

By

Published : Aug 29, 2020, 2:06 PM IST

ಚಾಮರಾಜನಗರ:ಬೆಳಗಾವಿಯಲ್ಲಿ ಕನ್ನಡ ಅನ್ನುವುದಕ್ಕೋಸ್ಕರ ಕೇಸ್ ದಾಖಲಾಗಿದ್ದರೆ ಅದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಬೆಳಗಾವಿ ಘಟನೆ ಕುರಿತು ಮಾತನಾಡಿದ ಸಚಿವ ಸುರೇಶ್ ಕುಮಾರ್

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೇಸ್ ದಾಖಲಾಗಿದೆ. ಕನ್ನಡ ಅನ್ನುವುದಕ್ಕಾಗಿ ಕೇಸ್ ದಾಖಲಾಗಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಕನ್ನಡದ ಅಭಿಮಾನದ ಬಗ್ಗೆ ಅವಮಾನ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಹೇಳಿದರು.

ಬೆಳಗಾವಿಯ‌ ವಿಚಾರದಲ್ಲಿ ಕನ್ನಡದ ವಿರುದ್ಧ, ಭಾಷೆ ಹಾಗೂ ಕನ್ನಡ ಅಸ್ಮಿತೆಯ ವಿರುದ್ಧ ಮಾತನಾಡಿದರೆ ಯಾರೂ ಸಹಿಸುವುದಿಲ್ಲ. ನಮ್ಮ ಜನರ ಭಾವನೆಯನ್ನು ಅರಿತು ಈ ಮಾತನ್ನು ಹೇಳುತ್ತಿದ್ದೇನೆ. ಬೆಳಗಾವಿ ನಗರ ಪಾಲಿಕೆಯನ್ನು ನಾನೇ ಸುಪರ್ ಸೀಡ್ ಮಾಡಿದ್ದು, ಇದು ಅವರಿಗೆ ನೆನಪಿರಲಿ. ನೆಲ, ಜಲ ಹಾಗೂ ಈ ನೆಲದ ಇತಿಹಾಸದ ಬಗ್ಗೆ ಮಾತನಾಡಿದರೆ ಎಂಇಎಸ್ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಎಂಇಎಸ್‌ ಪಕ್ಷಕ್ಕೆ ಅವರು ಖಡಕ್ ಎಚ್ಚರಿಕೆ ನೀಡಿದರು. ಎಂಇಎಸ್ ಪಕ್ಷ ಹಳೇಯ ಕಾಲದಲ್ಲಿಯೇ ಇದ್ದಾರೆ. ಅವರ ಉದ್ಧಟತನವನ್ನ ಬೆಳಗಾವಿಯ ಯುವ ಜನತೆ ಸಹಿಸುವುದಿಲ್ಲ. ಅವರ ಚಿಂತನೆ ಹಳೆಯದ್ದಾಗಿದೆ. ಮುಂದೆ ಬಂದು ಯೋಚನೆ ಮಾಡುತ್ತಿಲ್ಲ‌ ಎಂದು ಕಿಡಿಕಾರಿದರು.

ಸಂಗೊಳ್ಳಿ ರಾಯಣ್ಣ ಸ್ಫೂರ್ತಿದಾಯಕ ವ್ಯಕ್ತಿ. ಅವರ ಮಹತ್ವ ಎಲ್ಲರಿಗೂ ಗೊತ್ತಾಗಬೇಕು. ಶಿವಾಜಿ ಅವರದ್ದು ದೊಡ್ಡ ಸಾಹಸಗಾಥೆ. ಮಹಾನಾಯಕರ ಹೆಸರಿನಲ್ಲಿ ಈ ರೀತಿ ಗಲಾಟೆ ಮಾಡುವುದನ್ನು ಅವರ ಆತ್ಮವೂ ಒಪ್ಪುವುದಿಲ್ಲ. ಅವರೆಲ್ಲರೂ ಸಮಾಜವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಎಲ್ಲರನ್ನೂ ಸೇರಿಸಿಕೊಂಡು ಹೋರಾಟ ಮಾಡುವ ಕೆಲಸ ಮಾಡುತ್ತಿದ್ದರು. ಎರಡು ಗುಂಪುಗಳು ಕುಳಿತು ಸಮಸ್ಯೆ ಬಗ್ಗೆಹರಿಸಿಕೊಂಡಿರುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ABOUT THE AUTHOR

...view details