ಕೊಳ್ಳೇಗಾಲ:ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೊನಾ ವೈರಸ್ಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ದೊರಕಿದೆ.
ಜನತಾ ಕರ್ಪ್ಯೂಗೆ ಬೆಂಬಲ.. ಕೊಳ್ಳೇಗಾಲದಲ್ಲೂ ಸಂಪೂರ್ಣ ಸ್ತಬ್ಧ - Janatha curfew in Kollegala
ಕೊರೊನಾ ವೈರಸ್ಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ದೊರಕಿದೆ.
ಜನತಾ ಕರ್ಪ್ಯೂಗೆ ಬೆಂಬಲ: ಕೊಳ್ಳೇಗಾಲದಲ್ಲಿ ಅಂಗಡಿ ಮುಂಗಟ್ಟು, ಸಾರಿಗೆ ಸಂಪೂರ್ಣ ಸ್ತಬ್ಧ
ಅಂಗಡಿ-ಮುಂಗಟ್ಟು, ಬಾರ್ ಮತ್ತು ರೆಸ್ಟೋರೆಂಟ್, ಖಾಸಗಿ ಮತ್ತು ಸರ್ಕಾರಿ ಬಸ್ ಸೇವೆ ಸಂಪೂರ್ಣ ಬಂದಾಗಿದೆ. ಆಸ್ಪತ್ರೆ ಹಾಗೂ ಕೆಲವು ಮೆಡಿಕಲ್ಸ್ಗಳು ಕಾರ್ಯ ನಿರ್ವಹಿಸುತ್ತಿವೆ. ಪೇಪರ್, ಹಾಲು ಮಾರಾಟವಿದೆ. ಪ್ರಮುಖ ವೃತ್ತ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇನ್ನೂ ಕನ್ನಡಿಗರೇ ಹೆಚ್ಚಿರುವ ತಮಿಳುನಾಡಿನ ತಾಳವಾಡಿಯಲ್ಲೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.