ಚಾಮರಾಜನಗರ: ಕೊರೊನಾ ಸಾಂಕ್ರಾಮಿಕ ತೊಲಗಲೆಂದು ಮಾರಮ್ಮ ಹಾಗೂ ಇನ್ನಿತರೆ ಶಕ್ತಿ ದೇವತೆಗಳನ್ನು ಬೇಡಿಕೊಂಡಿರುವ ಜನರು ಕೋಳಿಗಳನ್ನು ಬಲಿ ನೀಡಿರುವ ಘಟನೆ ಚಾಮರಾಜನಗರದ ಗಂಗಾಮತಸ್ಥರ ಬೀದಿಯಲ್ಲಿ ನಡೆಯಿತು.
ಕೊರೊನಾ ತೊಲಗಲು ಮಾರಮ್ಮನಿಗೆ ಕೋಳಿ ಬಲಿ ಕೊಟ್ಟು ವಿಶೇಷ ಪೂಜೆ - ಚಾಮರಾಜನಗರ ಕೋಳಿ ಬಲಿ
ಕೊರೊನಾ ಮಾರಕ ರೋಗ ತೊಲಗಲಿ ಎಂದು ಪ್ರಾರ್ಥಿಸಿ ಚಾಮರಾಜನಗರ ಜನತೆ ಶಕ್ತಿ ದೇವತೆಗಳನ್ನು ಬೇಡಿಕೊಂಡು ಕೋಳಿಗಳನ್ನು ಬಲಿ ಕೊಟ್ಟಿರುವ ಘಟನೆ ನಡೆಯಿತು.
ಕೋಳಿ ಬಲಿ
ಕಳೆದ ವಾರವಷ್ಟೇ ನಡುರಸ್ತೆಯಲ್ಲಿ ಒಂಬತ್ತು ಮಂದಿ ಮುತ್ತೈದೆಯರು ಮಾರಮ್ಮನಿಗೆ ಗಂಗೆ ತಂದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಬೀದಿಯ ನಿವಾಸಿಗಳು ಕೋಳಿಗಳನ್ನು ಬಲಿಕೊಟ್ಟಿದ್ದಾರೆ. ಈ ಮೂಲಕ ಮಹಾಮಾರಿ ತೊಲಗಲಿ, ಜನಜೀವನ ಸಾಮಾನ್ಯವಾಗಲಿ ಎಂದು ಮಹಿಳೆಯರಾದಿಯಾಗಿ ಎಲ್ಲರೂ ಪ್ರಾರ್ಥಿಸಿದರು.
ಕೋಳಿ ರಕ್ತ ನೀಡಿದ ಬಳಿಕ ಬೀದಿಯಲ್ಲಿ ಕರ್ಪೂರ ಹಚ್ಚಿ, ಗಂಗೆಯನ್ನು ಪ್ರೋಕ್ಷಿಸಿ ಕೊರೊನಾ ಸಂಕಷ್ಟ ಬೇಗ ಮುಗಿದು ಜನಜೀವನ ಸಾಮಾನ್ಯವಾಗಬೇಕು, ಕೊರೊನಾಗೆ ಮೃತಪಡುತ್ತಿರುವುದು ನಿಲ್ಲಬೇಕೆಂದು ಕೇಳಿಕೊಳ್ಳಲಾಯಿತೆಂದು ಸ್ಥಳೀಯ ನಿವಾಸಿ ಚಾ.ರಂ.ಶ್ರೀನಿವಾಸಗೌಡ ತಿಳಿಸಿದರು.