ಕರ್ನಾಟಕ

karnataka

ETV Bharat / state

ವಿಷ ಪ್ರಸಾದ ದುರಂತದ ನಂತರ ಸುಳ್ವಾಡಿ ಮಾರಮ್ಮನ ಆದಾಯ 2.6 ಲಕ್ಷ ರೂ. - ಹುಂಡಿ ಹಣ ಎಣಿಕೆ ಸುದ್ದಿ

ಎರಡೂವರೆ ವರ್ಷದ ಬಳಿಕ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದೆ.

sulwadi maramma temple indoresee amount count
ಹುಂಡಿ ಎಣಿಕೆ

By

Published : Sep 30, 2020, 8:20 PM IST

ಚಾಮರಾಜನಗರ:ವಿಷ ಪ್ರಸಾದ ದುರಂತದ ಕೇಂದ್ರಬಿಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ಹುಂಡಿ ಎಣಿಕೆ ಎರಡೂವರೆ ವರ್ಷದ ಬಳಿಕ ಇಂದು ನಡೆದಿದೆ.

ಅ.20 ರಂದು ದೇಗುಲ ತೆರೆಯುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ರಾಮಾಪುರ ಪೊಲೀಸರ ಭದ್ರತೆ ಪಡೆದು, ಹುಂಡಿ ಎಣಿಕೆ ನಡೆಸಿದ ವೇಳೆ 2.60 ಲಕ್ಷ ರೂ. ಹಣ ಸಂಗ್ರಹವಾಗಿದೆ. ಜೊತೆಗೆ 2 ಗ್ರಾಂ ಚಿನ್ನ, 30 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ.

ಕಳೆದ 2018 ರ ಡಿಸೆಂಬರ್ 14 ರಂದು ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆ ದೇಗುಲ ಬಂದ್ ಮಾಡಿದ್ದರಿಂದ ಹುಂಡಿ ಎಣಿಕೆ ನಡೆದಿರಲಿಲ್ಲ.

ABOUT THE AUTHOR

...view details