ಕರ್ನಾಟಕ

karnataka

ETV Bharat / state

ಹಣ ಮುರಿಯುತ್ತೇವೆಂದ ಸಕ್ಕರೆ ಕಾರ್ಖಾನೆ ಅಧಿಕಾರಿಗಳನ್ನು ಕೂಡಿ ಹಾಕಿದ ಕಬ್ಬು ಬೆಳೆಗಾರರು! - ಕಬ್ಬು ಬೆಳೆಗಾರರ ಪ್ರತಿಭಟನೆ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬು ಸುಟ್ಟುಹೋಗಿದ್ದು, ಇದಕ್ಕೆ ಶೇ.25ರಷ್ಟು ಹಣ ಕಡಿತಗೊಳಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಕ್ಕೆ ರೊಚ್ಚಿಗೆದ್ದ ರೈತರು ಕಾರ್ಖಾನೆ ಅಧಿಕಾರಿಗಳನ್ನು ಕೂಡಿ ಹಾಕಿದ್ದಾರೆ.

Sugar cane growers who amass sugar factory officials
ಮಾಡದ ತಪ್ಪಿಗೆ ರೈತನಿಗೆ ಬರೆ

By

Published : Dec 11, 2019, 6:24 PM IST

ಚಾಮರಾಜನಗರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟುಹೋದ ಕಬ್ಬಿಗೆ ಶೇ.25 ರಷ್ಟು ಹಣ ಹಿಡಿಯುತ್ತೇವೆಂದ ಕಾರ್ಖಾನೆ ಅಧಿಕಾರಿಗಳನ್ನು ಕೂಡಿ ಹಾಕಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ತಿಮ್ಮಾರಾಜಿಪುರದ ಶಿವಣ್ಣ ಎಂಬವವರ ಬೆಳೆದು ನಿಂತಿದ್ದ ಒಂದೂವರೆ ಎಕರೆ ಕಬ್ಬು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟುಹೋಗಿತ್ತು. ಸುಟ್ಟುಹೋದ ಕಬ್ಬಿಗೆ ಶೇ.25ರಷ್ಟು ಹಣ ಹಿಡಿದುಕೊಳ್ಳುತ್ತೇವೆ ಎಂದು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಹೇಳಿದ್ದರಿಂದ ಕೆರಳಿದ ರೈತರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಮಾಡದ ತಪ್ಪಿಗೆ ರೈತನಿಗೆ ಬರೆ

12 ತಿಂಗಳಿಗೆ ಕಬ್ಬು ಕಟಾವು ಮಾಡಬೇಕಿತ್ತು. ಆದರೆ, 18 ತಿಂಗಳಾದರೂ ಕಬ್ಬನ್ನು ಕಟಾವು ಮಾಡದಿರುವುದು ಕಾರ್ಖಾನೆಯದ್ದೇ ತಪ್ಪು. 12 ತಿಂಗಳಿನೊಳಗೆ ಕಬ್ಬು ಸುಟ್ಟುಹೋಗಿದ್ದರೆ ಹಣ ಹಿಡಿಯುವುದು ಸರಿ. ಆದರೆ 18 ತಿಂಗಳಾದರೂ ಕಬ್ಬು ಕತ್ತರಿಸದೇ ಈಗ ಶೇ.25 ಹಣ ಹಿಡಿಯುತ್ತೇವೆ ಎಂಬುದು ಸರಿಯಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯ ವಿಳಂಬಗತಿ ಧೋರಣೆಯಿಂದ ಕಬ್ಬು ಸುಟ್ಟುಹೋಗಿದೆ. ಇದರಲ್ಲಿ ರೈತನ ಪಾತ್ರವಿಲ್ಲವಾದ್ದರಿಂದ ಸಂಪೂರ್ಣ ಹಣವನ್ನು ರೈತನಿಗೆ ನೀಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.

ABOUT THE AUTHOR

...view details