ಚಾಮರಾಜನಗರ:ಮಳಯಾಳಂನ 'ಸೂಫಿಯುಂ ಸೂಜಾತಯುಂ' ಚಿತ್ರದ ಶೂಟಿಂಗ್ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಗ್ರಾಮದಲ್ಲಿ ಮಳಯಾಳಂ ಕಂಪು ಪಸರಿಸಿದೆ.
ಗ್ರಾಮದಲ್ಲಿ ಮಸೀದಿ ಮತ್ತು ಬಸ್ ನಿಲ್ದಾಣದ ಸೆಟ್ಗಳನ್ನು ಹಾಕಿರುವ ಚಿತ್ರತಂಡ ಹಾಡುಗಳ ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರದಲ್ಲಿ ಜಯಸೂರ್ಯ ಆಕ್ಷನ್ ಚಿತ್ರಗಳ ಬಳಿಕ ಪ್ರೇಮಕಥೆ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ನಾಯಕಿಯಾಗಿ ಬೋಲ್ಡ್ ಬೆಡಗಿ ಅದಿತಿ ರಾವ್ ಹೈದರಿ ಕಾಣಿಸಿಕೊಂಡಿದ್ದಾರೆ.