ಕರ್ನಾಟಕ

karnataka

ETV Bharat / state

ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ! - subramanya shashti celebration

ಚಾಮರಾಜನಗರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ತಲೆ, ರಕ್ತ, ಮೊಟ್ಟೆಯನ್ನು ಎರೆಯಲಾಯಿತು. ಈ ರೀತಿ ಕೋಳಿ ಬಲಿ ಕೊಟ್ಟರೆ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ ಎಂಬುದು ಭಕ್ತರ ನಂಬಿಕೆ.

subramanya-shashti-celebration-in-chamarajanagara
ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ

By

Published : Dec 20, 2020, 2:13 PM IST

Updated : Dec 20, 2020, 3:30 PM IST

ಚಾಮರಾಜನಗರ:ಷಷ್ಠಿ ಬಂದರೆ ಹಾಲು, ಬೆಣ್ಣೆ, ಪಂಚಾಮೃತವನ್ನು ಹುತ್ತಕ್ಕೆ ಎರೆಯುವುದು ಸಾಮಾನ್ಯ. ಆದರೆ, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕೋಳಿ ತಲೆ, ರಕ್ತ, ಮೊಟ್ಟೆಯನ್ನು ಎರೆಯುವ ಪರಿಪಾಠ ತಲೆತಲಾಂತರದಿಂದ ನಡೆದುಬಂದಿದೆ.

ಹಾಲಿನ ಬದಲಿಗೆ ಕೋಳಿ ರಕ್ತ, ತಲೆಯೇ ಇಲ್ಲಿ ನಾಗಪ್ಪನಿಗೆ ನೈವೇದ್ಯ
ಚಾಮರಾಜನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಇಂದು ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಮೂಲಕ ಭಕ್ತರು ಇಷ್ಟಾರ್ಥ ಸಿದ್ದಿಗೆ ಬೇಡಿದ್ದಾರೆ. ಬಹುಪಾಲು ಮಂದಿ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ತಲೆ, ರಕ್ತ, ಮೊಟ್ಟೆಯನ್ನು ಹುತ್ತದ ಕೋವಿಗೆ ಹಾಕುತ್ತಾರೆ. ಭಯ-ಭಕ್ತಿಯಿಂದ ಈ ಹಬ್ಬ ಆಚರಿಸುತ್ತಿದ್ದು, ಪೂಜೆಯಾಗುವರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ.

ಓದಿ:ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಮುಷ್ಕರ: ಸರ್ಕಾರದ ಮಧ್ಯಪ್ರವೇಶಕ್ಕೆ ಹೆಚ್​ಡಿಕೆ ಆಗ್ರಹ

ಈ ರೀತಿ ಕೋಳಿ ಬಲಿಕೊಟ್ಟರೇ ಸರ್ಪ ಸಂಬಂಧದ ತೊಂದರೆ ನಿವಾರಣೆ ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ. ಇಷ್ಟಾರ್ಥ ಈಡೇರಿದ ಬಳಿಕ ನಾಗಪ್ಪನಿಗೆ ಕೋಳಿ ಬಲಿ ಕೊಟ್ಟು ಹರಕೆ ತೀರಿಸುತ್ತೇವೆ ಎಂದು ಭಕ್ತರು ತಿಳಿಸಿದ್ದಾರೆ.

Last Updated : Dec 20, 2020, 3:30 PM IST

ABOUT THE AUTHOR

...view details