ಕರ್ನಾಟಕ

karnataka

ETV Bharat / state

ಸೂಕ್ಷ್ಮ ಚಿತ್ರಗಳನ್ನು ಸೆರೆಹಿಡಿಯುತ್ತಿರುವುದು ಚಂದ್ರಯಾನ-2 ಆರ್ಬಿಟರ್ ಮಾತ್ರ.. - Chandrayaan-2 Orbiter

ಮಂಗಳಯಾನದ ಮೂಲಕ ಇಡೀ ವಿಶ್ವವೇ ನಮ್ಮ ದೇಶದತ್ತ ತಿರುಗುವಂತೆ ಮಾಡಿದೆವು. ಚಂದ್ರಯಾನ-2 ಅಂತಿಮ ಕ್ಷಣದಲ್ಲಿ ವಿಫಲವಾದರೂ ಇಡೀ ಪ್ರಪಂಚದಲ್ಲಿ ಚಂದ್ರನ ಸುತ್ತಾ ಸುತ್ತುತ್ತಿರುವ ಉಪಗ್ರಹಗಳಲ್ಲಿ ಅತೀ ಸೂಕ್ಷ್ಮವಾದ ಚಿತ್ರಗಳನ್ನು ಕಳುಹಿಸುತ್ತಿರುವುದು ಚಂದ್ರಯಾನ-2ನ ಆರ್ಬಿಟರ್ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ ಎಸ್​ ಕಿರಣ್ ಕುಮಾರ್ ಹೇಳಿದರು.

ಸೂಕ್ಷ್ಮ ಚಿತ್ರಗಳನ್ನು ಸೆರೆಹಿಡಿಯುತ್ತಿರುವುದು ಚಂದ್ರಯಾನ-2 ಆರ್ಬಿಟರ್ ಮಾತ್ರ

By

Published : Oct 15, 2019, 10:25 PM IST

ಚಾಮರಾಜನಗರ:ನೂರಾರು ವರ್ಷಗಳಿಗೆ ಹೋಲಿಸಿದರೆ ಇಂದಿನ ಜನರ ಜೀವನ ಸುಧಾರಣೆಯಾಗಲು ಕಾರಣ ವಿಜ್ಞಾನ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ ಎಸ್​ ಕಿರಣ್ ಕುಮಾರ್ ಹೇಳಿದರು.

ಗ್ರಾವಿಟಿ ಸೈನ್ಸ್ ಫೌಂಡೇಷನ್ ವತಿಯಿಂದ ನಗರದ ಜೆ ಹೆಚ್ ಪಟೇಲ್ ಸಭಾಂಗಣಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈನಂದಿನ ಜನ ಜೀವನಕ್ಕೆ ಅಗತ್ಯ ಸೌಲಭ್ಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಒದಗಿಸಿಕೊಡುತ್ತಿದೆ. ಇಸ್ರೋ ಸಂಸ್ಥೆಯಿಂದ ನಮ್ಮ ದೇಶ ಮಾತ್ರವಲ್ಲದೆ ಸಾರ್ಕ್ ದೇಶಗಳು ಉಪಯೋಗ ಪಡೆಯುತ್ತಿದೆ ಎಂದರು.

ಮಾನವ ಚಂದ್ರನ ಮೇಲೆ ಇಳಿದಿದ್ದಾನೆ. ಹಲವು ಉಪಗ್ರಹಗಳು ಚಂದ್ರನ ಸುತ್ತ ಸುತ್ತುತ್ತಿವೆ. ಆದರೆ, 2008ರಲ್ಲಿ ಚಂದ್ರಯಾನ-1, ಚಂದ್ರನ ಮೇಲ್ಮೈನಲ್ಲಿ ನೀರಿದೆ ಎಂದು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿತು. ಮಂಗಳಯಾನದ ಮೂಲಕ ಇಡೀ ವಿಶ್ವವೇ ನಮ್ಮ ದೇಶದತ್ತ ತಿರುಗುವಂತೆ ಮಾಡಿದೆವು. ಚಂದ್ರಯಾನ-2 ಅಂತಿಮ ಕ್ಷಣದಲ್ಲಿ ವಿಫಲವಾದರೂ ಇಡೀ ಪ್ರಪಂಚದಲ್ಲಿನ ಚಂದ್ರನ ಸುತ್ತಾ ಸುತ್ತುತ್ತಿರುವ ಉಪಗ್ರಹಗಳಲ್ಲಿ ಅತೀ ಸೂಕ್ಷ್ಮವಾದ ಚಿತ್ರಗಳನ್ನು ಕಳುಹಿಸುತ್ತಿರುವುದು ಚಂದ್ರಯಾನ-2ನ ಆರ್ಬಿಟರ್. ಕೇವಲ 25-30 ಸೆಮೀ ರೆಸಲ್ಯೂಷನ್‌ನಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದು, ಇನ್ನೂ ಹಲವಾರು ವರ್ಷಗಳು ಈ ಆರ್ಬಿಟರ್ ಕೆಲಸ ಮಾಡಲಿದೆ ಎಂದು ತಿಳಿಸಿದರು.

ABOUT THE AUTHOR

...view details