ಚಾಮರಾಜನಗರ : ವಾರ್ಷಿಕ ಶುಲ್ಕ ಒಂದೇ ಬಾರಿ ಪಾವತಿ ಮಾಡದಕ್ಕೆ ವಿದ್ಯಾರ್ಥಿಯನ್ನು ಆನ್ಲೈನ್ ತರಗತಿಯಿಂದ ಹೊರಗಿಟ್ಟಿರುವ ಘಟನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉಸ್ತುವಾರಿಯಾಗಿರೋ ಜಿಲ್ಲೆಯಲ್ಲೇ ನಡೆದಿದೆ.
ಫೀಸ್ ಕಟ್ಟದಿದ್ದಕ್ಕೆ ಆನ್ಲೈನ್ ಕ್ಲಾಸ್ನಿಂದ ವಿದ್ಯಾರ್ಥಿ ಹೊರಕ್ಕೆ.. ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಘಟನೆ.. - ಆನ್ಲೈನ್ ಕ್ಲಾಸ್ನಿಂದ ವಿದ್ಯಾರ್ಥಿಯನ್ನು ಹೊರ ಹಾಕಿದ ಶಾಲೆ
ಫೀಸ್ ಕಟ್ಟದಿದ್ದಕ್ಕೆ ಆನ್ಲೈನ್ ಕ್ಲಾಸ್ನಿಂದ ವಿದ್ಯಾರ್ಥಿಯನ್ನು ಹೊರಗಿಟ್ಟ ಘಟನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಸ್ತುವಾರಿ ಜಿಲ್ಲೆಯಲ್ಲಿ ನಡೆದಿದೆ..
ಮಹೇಶ್, ವಿದ್ಯಾರ್ಥಿಯ ತಂದೆ
ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಯಶಸ್ ಎಂ. ಎಂಬ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗಿಟ್ಟು, ಆರ್ಟಿಐ ಕಾಯ್ದೆಯ 21 (ಎ) ಅನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆಂದು ಯಶಸ್ನ ತಂದೆ ಕುರುಬರಹುಂಡಿಯ ಮಹೇಶ್ ಆರೋಪಿಸಿದ್ದಾರೆ.
ಈ ಕುರಿತು ಇಂದು ಜಿಲ್ಲೆಗೆ ಬಂದಿದ್ದ ಸಚಿವರ ಗಮನಕ್ಕೂ ತಂದಿದ್ದಾರೆ. ಸಚಿವರು ಸಮಸ್ಯೆ ಪರಿಹರಿಸುವಂತೆ ಡಿಡಿಪಿಐಗೆ ಸೂಚಿಸಿದ್ದಾರೆ.