ಕೊಳ್ಳೆಗಾಲ: ಕೊರೊನಾ ಸೋಂಕು ಜಿಲ್ಲೆಗೆ ಬಾರದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿದೆ. 144 ಸೆಕ್ಷನ್ ಜಾರಿಗೊಳಿಸಿ ನಿಗದಿತ ಸಮಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರವೇ ಆದೇಶ ಹೊರಡಿಸಿದೆ. ಆದರೆ, ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಲಾಕ್ ಡೌನ್ ಗೂ ಕೇರ್ ಮಾಡದೇ ಲಾಕ್ ಆಗಬೇಕಾದ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತಿದೆ.
ಲಾಕ್ಡೌನ್ಗೆ ಡೋಂಟ್ ಕೇರ್.... ಇಲ್ಲಿ ಎಲ್ಲವೂ ಓಪನ್
ಕೊರೊನಾ ಸೋಂಕು ಜಿಲ್ಲೆಗೆ ಬಾರದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿದೆ. 144 ಸೆಕ್ಷನ್ ಜಾರಿಗೊಳಿಸಿ ನಿಗದಿತ ಸಮಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರವೇ ಆದೇಶ ಹೊರಡಿಸಿದೆ. ಆದರೆ, ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಲಾಕ್ ಡೌನ್ ಗೂ ಕೇರ್ ಮಾಡದೇ ಲಾಕ್ ಆಗಬೇಕಾದ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತಿದೆ.
ಲಾಕ್ ಡೌನ್ ಗೂ ಕೇರ್ ಮಾಡದೆ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ
ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಮಾತ್ರ ತೆರೆಯಲು ಅನುಮತಿ ಇದೆ. ಆದರೆ, ಮೊಬೈಲ್ ಶಾಪ್, ಆಟೋ ಮೊಬೈಲ್ಸ್, ಸ್ಟೇಷನರಿಸ್, ಕಟಿಂಗ್ ಶಾಪ್, ಸೇರಿದಂತೆ ಇನ್ನಿತ್ತರ ಅಂಗಡಿಗಳು ತೆರೆಯುತ್ತಿದೆ. ಇದರಿಂದ ಬೀದಿಗೆ ಇಳಿಯುವ ಜನತೆಯ ಸಂಖ್ಯೆ ಹೆಚ್ಚಾಗಿದೆ. ಲಾಕ್ ಡೌನ್ ಗೆ ಸಹಕರಿಸುವ ಕೆಲವು ಅಂಗಡಿಗಳ ವ್ಯಾಪಾರಸ್ಥರಿಗೂ ತೆರೆಯುವಂತೆ ಪ್ರೇರೆಪಿಸಿದಂತಾಗಿದೆ.
ತಾಲೂಕು ಆಡಳಿತ ಹಾಗೂ ನಗರಸಭೆ ಲಾಕ್ಡೌನ್ ಪಾಲಿಸಲು ಏನೆಲ್ಲ ಕ್ರಮ ಕೈಗೊಂಡರೂ ನಿಯಮ ಉಲ್ಲಂಘನೆ ಸಹಜವಾಗುತ್ತಿದೆ.