ಕೊಳ್ಳೇಗಾಲ:ಕಿಡಿಗೇಡಿಗಳು ಪಟಾಕಿ ತುಂಬಿದ ಅನಾನಸ್ ಹಣ್ಣನ್ನು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಗರ್ಭಿಣಿ ಆನೆಗೆ ತಿನಿಸಿದ ಪರಿಣಾಮ ಆನೆ ಮೃತಪಟ್ಟಿರುವ ದಾರುಣ ಘಟನೆ ನೆನೆದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್ ಭಾವುಕರಾದರು.
ಗರ್ಭಿಣಿ ಆನೆ ಹತ್ಯೆಗೆ ಕಂಬನಿ ಮಿಡಿದ ಸಚಿವ ಎಸ್.ಸುರೇಶ್ ಕುಮಾರ್
ಕೇರಳದಲ್ಲಿ ಮಾನವ ನಿರ್ಮಿತ ಕೃತ್ಯದಿಂದ ಅಮಾಯಕ ಗರ್ಭಿಣಿ ಆನೆ ಸಾವನ್ನಪ್ಪಿರುವ ಪ್ರಕರಣ ನೆನೆಸಿಕೊಂಡು ಸಚಿವ ಸುರೇಶ ಕುಮಾರ್ ಕಂಬನಿ ಮಿಡಿದರು.
ಸಚಿವ ಸುರೇಶ ಕುಮಾರ್
ಪ್ರಾಣಿಗಳನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಮುಂದೆ ಯಾರೂ ಈ ರೀತಿ ಮಾಡಬಾರದು. ಕೇರಳದಲ್ಲಿ ನಡೆದ ಕೃತ್ಯ ಮಾತ್ರ ಖಂಡನೀಯ. ಪರಿಸರ ಉಳಿಸಿ ಸಂರಕ್ಷಿಸುವ ಗುಣ ಬೆಳೆಸಿಕೊಳ್ಳಬೇಕು. ಈ ಕುರಿತು ಸಹಿ ಸಂಗ್ರಹ ಚಳುವಳಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.