ಕರ್ನಾಟಕ

karnataka

ಮಲೆಮಹದೇಶ್ವರ ಬೆಟ್ಟದಲ್ಲಿ ಎಡವಟ್ಟು: ಲಡ್ಡು ಜೊತೆ ಭಕ್ತನ ಕೈಸೇರಿದ ₹2.9 ಲಕ್ಷ ದುಡ್ಡು

By

Published : Jul 29, 2022, 11:19 AM IST

ಲಾಡು ಪ್ರಸಾದದ ಸಮೇತ ಕೌಂಟರ್​ನಲ್ಲಿದ್ದ 2.19 ಲಕ್ಷ ಹಣವನ್ನೂ ಭಕ್ತನೋರ್ವನಿಗೆ ನೀಡಿ ಮಲೆ ಮಹದೇಶ್ವರ ದೇವಸ್ಥಾನದ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ.

Male Mahadeshwara hill
ಮಲೆ ಮಹದೇಶ್ವರ ಬೆಟ್ಟ

ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಭೀಮನ ಅಮವಾಸ್ಯೆಗೆ ಅಚರಣೆಗೆ ಅಪಾರ ಭಕ್ತ ಸಮೂಹ ನೆರೆದಿತ್ತು. ಈ ಸಂದರ್ಭದಲ್ಲಿ ರಾಜಗೋಪುರದ ಬಳಿ ವಿಶೇಷ ದರ್ಶನ ಕೌಂಟರ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನೊಬ್ಬ ಕಣ್ತಪ್ಪಿನಿಂದ ಲಾಡು ಪ್ರಸಾದದ ಬ್ಯಾಗ್​ನ ಜೊತೆಗೆ 2.91 ಲಕ್ಷ ರೂ ಹಣವನ್ನೂ ಭಕ್ತನೋರ್ವನಿಗೆ ಒಪ್ಪಿಸಿದ್ದಾನೆ.

ಈ ನೌಕರ ಭಕ್ತರಿಗೆ ವಿಶೇಷ ದರ ಟಿಕೇಟ್ ನೀಡಿ ಲಾಡು ಪ್ರಸಾದ ನೀಡಿದ್ದಾನೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನೂ ಸಹ ಇಟ್ಟಿದ್ದ ಕಾರಣ ಹಣಸಹಿತ ಬ್ಯಾಗ್ ಅ​ನ್ನು ಭಕ್ತನೋರ್ವನಿಗೆ ನೀಡಿ ಎಡವಟ್ಟು ಮಾಡಿದ್ದಾನೆ. ಇದಾದ ಬಹಳ ಹೊತ್ತಿನ ಬಳಿಕ ಹಣ ಕಾಣಿಸದಿದ್ದರಿಂದ ಹುಡುಕಾಟ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿಯ ಕಣ್ತಪ್ಪಿನಿಂದ ದುಡ್ಡು ಲಾಡು ಜೊತೆ ಹೋಗಿರುವುದು ಗೊತ್ತಾಗಿದೆ.

ಪ್ರಾಧಿಕಾರದ ಬೊಕ್ಕಸಕ್ಕೆ 2.91 ರೂ ಲಕ್ಷ ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:28 ದಿನ, ಹುಂಡಿಯಲ್ಲಿ ಕೋಟಿ-ಕೋಟಿ ಹಣ.. ಮಲೆ ಮಹದೇಶ್ವರನಿಗೆ ಕಾಣಿಕೆ ಭರಪೂರ

ABOUT THE AUTHOR

...view details