ಕರ್ನಾಟಕ

karnataka

ETV Bharat / state

ಪಿಕ್ಚರು ಇಲ್ಲ, ರೀಲೂ ಇಲ್ಲ: ಸಚಿವ ಆನಂದ್ ಸಿಂಗ್ ಹೇಳಿಕೆಗೆ ಸೋಮಶೇಖರ್ ಟಾಂಗ್​​ - ಸಚಿವ ಆನಂದ್ ಸಿಂಗ್ ಹೇಳಿಕೆಗೆ ಸೋಮಶೇಖರ್ ಪ್ರತಿಕ್ರಿಯೆ

ಭಾನುವಾರ ಮಾಧ್ಯಮಗಳು ಖಾತೆ ಬದಲಾವಣೆಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ ಸಚಿವ ಆನಂದ್​ ಸಿಂಗ್​, ಪಿಕ್ಚರ್ ಅಭಿ ಬಿ ಬಾಕಿ ಹೈ ಎಂದು ಹೇಳಿಕೆ ನೀಡಿದ್ದರು. ಈ ಕುರಿತಂತೆ ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್​ ಪ್ರತಿಕ್ರಿಯೆ ನೀಡಿದ್ದಾರೆ.

ST Somashekar
ಸಚಿವ ಎಸ್​ಟಿ ಸೋಮಶೇಖರ್

By

Published : Aug 16, 2021, 3:17 PM IST

ಚಾಮರಾಜನಗರ:ಯಾವು ಪಿಕ್ಚರು ಇಲ್ಲ, ರೀಲೂ ಇಲ್ಲ ಎನ್ನುವ ಮೂಲಕ ಸಚಿವ ಆನಂದ್​ ಹೇಳಿಕೆಗೆ ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್​ ಪ್ರತಿಕ್ರಿಯೆ ನೀಡಿದ್ದಾರೆ.

ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್​ ಪ್ರತಿಕ್ರಿಯೆ

ಕೊಳ್ಳೇಗಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿಯವರು ಉತ್ತಮ‌ ಕೆಲಸ ಮಾಡುತ್ತಿದ್ದು, ಕ್ಲೀನ್ ಇಮೇಜ್ ಸರ್ಕಾರ ಕೊಡಬೇಕೆಂಬ ಕನಸನ್ನು ಹೊಂದಿದ್ದಾರೆ. ಯಾವುದೇ ಅಸಮಾಧಾನ ಇದ್ದರೆ ಮುಖ್ಯಮಂತ್ರಿ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬೇಕೆ ಹೊರತು, ಹೊರಗೆ ಬಂದು ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಆನಂದ್ ಸಿಂಗ್ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಬೊಮ್ಮಾಯಿಯವರು ಸಿಎಂ ಆದ ಮೇಲೆ ಕಾಂಗ್ರೆಸ್​​​​ನವರಿಗೆ ನಡುಕ‌‌ ಉಂಟಾಗಿ ಏನೇನೂ‌ ಹೇಳಿಕೆ ಕೊಡುತ್ತಿದ್ದಾರೆ. ಗೃಹ ಸಚಿವರಾಗಿ, ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದು, ಸಿಎಂ‌ ಆಗಿ ಬೊಮ್ಮಾಯಿ ಸರ್ಕಾರದ ಅವಧಿ ಪೂರೈಸಲಿದ್ದಾರೆ‌. ಸರ್ಕಾರ ಬಿದ್ದೋಗಲಿದೆ ಎಂಬುದೆಲ್ಲಾ ಕಾಂಗ್ರೆಸ್​​ನವರ ಹಗಲುಗನಸು ಎಂದು ಕೈ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ‌ ಕೊರೊನಾ ಸೋಂಕು‌ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎರಡನೇ ಅಲೆಯಲ್ಲಿ ಉಂಟಾದ ಹಾನಿಗಳಿಂದ ಈಗ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ಭಾನುವಾರ ಮಾಧ್ಯಮದವರು ಖಾತೆ ಬದಲಾವಣೆಯ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಚಿವ ಆನಂದ್​ ಸಿಂಗ್​, ಪಿಕ್ಚರ್ ಅಭಿ ಬಿ ಬಾಕಿ ಹೈ ಎಂದು ಹೇಳಿಕೆ ನೀಡಿದ್ದರು.

ABOUT THE AUTHOR

...view details