ಚಾಮರಾಜನಗರ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೊರೊನಾ ಸೋಂಕು ತಗುಲಿದ ಬಳಿಕ ಹೇಗೇಗೋ ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಲೇವಡಿ ಮಾಡಿದರು.
ಕೊರೊನಾ ಬಂದ ಬಳಿಕ ಸಿದ್ದರಾಮಯ್ಯ ಹೇಗೇಗೋ ಮಾತಾಡ್ತಾರೆ: ಪಂಚೆ ಬಿಚ್ಚೋದ್ರು ಗೊತ್ತಾಗಲ್ಲ- ಸಚಿವರ ಪಂಚ್ - ಚಾಮರಾಜನಗರ ನ್ಯೂಸ್
ಸಿದ್ದರಾಮಯ್ಯ ಕೊರೊನಾ ಬರುವ ಮುನ್ನ ಬಹಳ ವಿಶ್ವಾಸಾರ್ಹವಾಗಿ ಮಾತನಾಡುತ್ತಿದ್ದರು. ಆದರೆ, ಕೊರೊನಾ ಬಂದ ಬಳಿಕ ಏನೇನೋ ಮಾತನಾಡುತ್ತಿದ್ದಾರೆ. ಪಂಚೆ ಬಿಚ್ಚೋದ್ರು ಅವರಿಗೆ ಗೊತ್ತಾಗುತ್ತಿಲ್ಲ ಎಂದು ಎಸ್.ಟಿ ಸೋಮಶೇಖರ್ ವ್ಯಂಗ್ಯವಾಡಿದರು.
ನಗರದಲ್ಲಿ ನಿನ್ನೆ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೊರೊನಾ ಬರುವ ಮುನ್ನ ಬಹಳ ವಿಶ್ವಾಸಾರ್ಹವಾಗಿ ಮಾತನಾಡುತ್ತಿದ್ದರು. ಆದರೆ, ಕೊರೊನಾ ಬಂದ ಬಳಿಕ ಏನೇನೋ ಮಾತನಾಡುತ್ತಿದ್ದಾರೆ. ಏನು ಮಾತನಾಡುತ್ತಿದ್ದೇನೆ ಎಂದು ಅವರಿಗೇ ತಿಳಿಯುತ್ತಿಲ್ಲ. ಪಂಚೆ ಬಿಚ್ಚೋದ್ರು ಗೊತ್ತಾಗದಷ್ಟು ಅವರು ಬದಲಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಕ್ಷ ಬದಲಾವಣೆ ಮಕ್ಕಳಾಟವಲ್ಲ, ಕಾಂಗ್ರೆಸ್ಗೆ ಮತ್ತೆ ಸೇರ್ಪಡೆಯಾಗುವುದಿಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ಬಹಳ ಸುಭದ್ರವಾಗಿದೆ. ಉಪ ಚುನಾವಣೆ ಕುರಿತು ಇದೇ 3 ರಂದು ಕೋರ್ ಕಮಿಟಿ ತೀರ್ಮಾನ ಕೈಗೊಳ್ಳಲಿದೆ ಎಂದರು.