ಚಾಮರಾಜನಗರ:ವಾಕಿಂಗ್ಗೆ ತೆರಳಿದ್ದ ಎಸ್ಎಸ್ಎಸ್ಸಿ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆಯ ನಿರ್ಮಲ ಶಾಲೆಯಲ್ಲಿ ಇಂದು ನಡೆಯಿತು. ಪೆಲಿಸಾ ಸಾವಿಗೀಡಾದ ವಿದ್ಯಾರ್ಥಿನಿ.
ಕುಸಿದು ಬಿದ್ದ ತಕ್ಷಣ ಶಾಲೆಯ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಆಕೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ತಾಯಿ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೆಲಿಸಾ ಮೂಲತಃ ಬೆಂಗಳೂರಿನ ನಿವಾಸಿ. ಇವರ ತಂದೆ ನಿಧನರಾಗಿದ್ದಾರೆ. ಕ್ರೈಸ್ತ ಮಿಷನರಿ ಸಹಾಯದಿಂದ ವಿದ್ಯಾಭ್ಯಾಸಕ್ಕಾಗಿ ಗುಂಡ್ಲುಪೇಟೆ ನಿರ್ಮಲ ಶಾಲೆಗೆ ದಾಖಲಾಗಿದ್ದು, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹೃದಯಾಘಾತದಿಂದ ಸ್ಪಂದನಾ ನಿಧನ:ಚಂದನವನದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಭಾನುವಾರ ತಡರಾತ್ರಿ ಮೃತಪಟ್ಟಿದ್ದರು. ಸ್ಪಂದನಾ ಸಂಬಂಧಿಕರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿತ್ತು.
ಕುಸಿದು ಬಿದ್ದು ಹೆಡ್ಕಾನ್ಸ್ಟೇಬಲ್ ಸಾವು:ಇತ್ತೀಚಿಗೆ,ಕಡಿಮೆ ರಕ್ತದೊತ್ತಡದಿಂದ ಕುಸಿದು ಬಿದ್ದು ಕರ್ತವ್ಯನಿರತ ಹೆಡ್ ಕಾನ್ಸ್‌ಟೇಬಲ್ ಸಾವನ್ನಪ್ಪಿದ ಘಟನೆ ಹಾವೇರಿಯ ರಟ್ಟಿಹಳ್ಳಿಯಲ್ಲಿ ನಡೆದಿತ್ತು. ಬಸಪ್ಪ ಮಲ್ಲಾಡದ(48) ಮೃತ ಹೆಡ್ಕಾನ್ಸ್ಟೇಬಲ್. ಇವರು ರಾಣೆಬೆನ್ನೂರು ತಾಲ್ಲೂಕಿನ ಹಾರೋಗೊಪ್ಪ ನಿವಾಸಿ. 26 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ:ಮೋಟಾರ್ ಸೈಕಲ್ ರೇಸಿಂಗ್ ಸ್ಪರ್ಧೆ ವೇಳೆ ಅಪಘಾತ: ಬೆಂಗಳೂರಿನ 13 ವರ್ಷದ ರೈಡರ್ ಶ್ರೇಯಸ್ ಹರೀಶ್ ಸಾವು
ಕರ್ತವ್ಯನಿರತ ಸಬ್ ಇನ್ಸ್‌ಪೆಕ್ಟರ್ ಸಾವು:ಕರ್ತವ್ಯನಿರತ ಎಎಸ್‌ಐ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ಜು.7ರಂದು ತುಮಕೂರು ಜಿಲ್ಲೆಯ ಶಿರಾ ಪೊಲೀಸ್ ಠಾಣೆಯಲ್ಲಿ ನಡೆದಿತ್ತು. ಶಿರಾ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಗಂಗಣ್ಣ (56) ಮೃತರು. ಇವರು ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ಕರ್ತವ್ಯದಲ್ಲಿದ್ದರು. ಈ ವೇಳೆ ಹೃದಯಾಘಾತವಾಗಿತ್ತು. ತಕ್ಷಣ ಪೊಲೀಸ್ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ತುಮಕೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.
ಇದನ್ನೂ ಓದಿ:ದೊಡ್ಡಣ್ಣ, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿ ಗಣ್ಯರಿಂದ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ