ಕರ್ನಾಟಕ

karnataka

ETV Bharat / state

ಅವಕಾಶವಾದಿ ರಾಜಕಾರಣಿ ಖರ್ಗೆಗೆ ಮರದ ಕತ್ತಿ-ರಟ್ಟಿನ ಗುರಾಣಿ: ಸಂಸದ ವಿ.ಶ್ರೀನಿವಾಸ​ ಪ್ರಸಾದ್ - ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್​ ಪ್ರಸಾದ್​ ಹೇಳಿಕೆ

ವಿಪಕ್ಷ ನಾಯಕರಾಗಿದ್ದ ಖರ್ಗೆ ರಾಜ್ಯ ರಾಜಕಾರಣದಲ್ಲಿ ತಮ್ಮದೇನು ನಡೆಯಲ್ಲ ಎಂದು ಗೊತ್ತಾದ ಬಳಿಕ ಸಂಸತ್ತಿಗೆ ಹಾರಿ ಕಾರ್ಮಿಕ ಸಚಿವರಾದರು ಎಂದು ಸಂಸದ ವಿ.ಶ್ರೀನಿವಾಸ​ ಪ್ರಸಾದ್ ಟೀಕಿಸಿದರು. ​

Kn_cnr
ವಿ.ಶ್ರೀನಿವಾಸ​ ಪ್ರಸಾದ್

By

Published : Nov 15, 2022, 3:13 PM IST

ಚಾಮರಾಜನಗರ: ಮಲ್ಲಿಕಾರ್ಜುನ ಖರ್ಗೆ ಓರ್ವ ಅವಕಾಶವಾದಿ ರಾಜಕಾರಣಿ ಎಂದು ಸಂಸದ ವಿ‌.ಶ್ರೀನಿವಾಸ ಪ್ರಸಾದ್ ಟೀಕಿಸಿದರು.

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಜೊತೆಗೆ ವಿಪಕ್ಷ ನಾಯಕರಾಗಿದ್ದ ಖರ್ಗೆ ರಾಜ್ಯ ರಾಜಕಾರಣದಲ್ಲಿ ತಮ್ಮದೇನು ನಡೆಯಲ್ಲ ಎಂದು ಗೊತ್ತಾದ ಬಳಿಕ ಸಂಸತ್ತಿಗೆ ಹಾರಿ ಕಾರ್ಮಿಕ ಸಚಿವರಾದರು. ಖರ್ಗೆ ಓರ್ವ ಅವಕಾಶವಾದಿ ರಾಜಕಾರಣಿಯಷ್ಟೇ. ಅವರೇನೂ ಪಕ್ಷ‌ ಕಟ್ಟಿದ್ದಾರಾ..? ಹೋರಾಟ ಮಾಡಿದ್ದಾರಾ..? ಎಂದು ತೀಕ್ಷ್ಣ ಮಾತುಗಳಿಂದ ಟೀಕಾ ಪ್ರಹಾರ ನಡೆಸಿದರು.

ಈಗ ಖರ್ಗೆಗೆ ಮರದ ಕತ್ತಿ ಹಾಗೂ ರಟ್ಟಿನ‌ ಗುರಾಣಿ ಕೊಟ್ಟು ಯುದ್ಧಕ್ಕೆ ಕಳುಹಿಸಿದ್ದಾರೆ‌. ಪ್ರಜಾ ಪ್ರಭುತ್ವದಲ್ಲಿ ಜನರು ಅರ್ಥ ಮಾಡಿಕೊಂಡಿದ್ದಾರೆ, ಅಭಿವೃದ್ಧಿ ಪರ ಸರ್ಕಾರವನ್ನು ಆರಿಸುತ್ತಾರೆ. ಬಿಜೆಪಿ ಪರ ಅಲೆ ಇದೆ ಎಂದು ವಿಶ್ವಾಸ ಹೊರಹಾಕಿದರು.

ಸಿದ್ದರಾಮಯ್ಯ ಕೊನೇ ಆಟ ಕೋಲಾರ: ಸಿದ್ದರಾಮಯ್ಯ ಈ ಬಾರಿ ನಿಲ್ಲುವುದೇ ಕೋಲಾರದಲ್ಲಿ, ಹೈಕಮಾಂಡ್ ತೀರ್ಮಾನ ಎಂದು ಸುಮ್ಮನೆ ಹೇಳುತ್ತಿದ್ದು, ಕೋಲಾರದಲ್ಲೇ ನಿಲ್ಲುತ್ತಾರೆ. ಆದರೆ ಅದನ್ನೂ ಸ್ಪಷ್ಟವಾಗಿ ಹೇಳಲ್ಲ. 224 ಕ್ಷೇತ್ರದಲ್ಲೂ ಕರೆಯುತ್ತಾರೆ ಎಂದು ಹೇಳುವ ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೇ ಚಾಮುಂಡೇಶ್ವರಿಯಲ್ಲೇ ನಿಲ್ಲಬಹುದಿತ್ತು, ವರುಣದಲ್ಲಿ ನಿಲ್ಲಬಹುದಿತ್ತು. ಕೋಲಾರದ ತನಕ ಓಡಬೇಕಿತ್ತಾ..? ವೀರಾವೇಶದ ಮಾತುಗಳು ಚುನಾವಣೆ ಬಂದಾಗ ಗೊತ್ತಾಗಲಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್​ ಜರಿದರು.

ಇದನ್ನೂ ಓದಿ:ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ: ವಿಪಕ್ಷ ಸಿದ್ದರಾಮಯ್ಯ

ABOUT THE AUTHOR

...view details