ಕರ್ನಾಟಕ

karnataka

ETV Bharat / state

ಚಾಮರಾಜನಗರ ಜಿಲ್ಲೆಯ ಈ ಗ್ರಾಮದಲ್ಲಿ ಹರಕೆ ಹಣ, ಸೀರೆ, ಆಭರಣ ಹುಂಡಿಗಲ್ಲ.. ಅಗ್ನಿಗೆ ಸಮರ್ಪಣೆ! - chamarajanagara latest news

ಬೆಳಕಿನ ಹಬ್ಬದಲ್ಲಿ ಅಗ್ನಿಗೆ ಹರಕೆ ಸಮರ್ಪಿಸುವ ಆಚರಣೆ ವಿಶಿಷ್ಟ ಮತ್ತು ವಿಭಿನ್ನವಾಗಿದ್ದು, ವಿಶೇಷ ಕೊಂಡೋತ್ಸವ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಹತ್ತಾರು ಊರಿನ ಮಂದಿ ಸೋಮನಹಳ್ಳಿಗೆ ಆಗಮಿಸುತ್ತಾರೆ.‌

special worship in chamarajanagara
ಕೊಂಡಕ್ಕೆ ಹರಕೆ ಸಮರ್ಪಿಸಿದ ಚಾಮರಾಜನಗರ ಜನತೆ

By

Published : Nov 6, 2021, 12:59 PM IST

ಚಾಮರಾಜನಗರ: ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಟ್ಟಿಕೊಂಡು ಬಳಿಕ ಪೂಜೆ-ಪುನಸ್ಕಾರ ಸಲ್ಲಿಸಿ ಹುಂಡಿಗೆ ಹರಕೆ ಕಾಣಿಕೆ ಅಥವಾ ದೇವರಿಗೆ ಹರಕೆ ಸಾಮಗ್ರಿ ಸಲ್ಲಿಸುವುದು ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ ಕೊಂಚ ವಿಭಿನ್ನ. ಏನೇ ಹರಕೆ ಕಟ್ಟಿಕೊಂಡಿದ್ದರೂ ಅದನ್ನು ಅಗ್ನಿಗೆ ಸಮರ್ಪಿಸುತ್ತಾರೆ ಸೋಮನಹಳ್ಳಿ ಜನ.

ಹೌದು, ಗುಂಡ್ಲುಪೇಟೆ ತಾಲೂಕಿನ‌ ಸೋಮನಹಳ್ಳಿಯಲ್ಲಿ ಪ್ರತಿ ವರ್ಷ ದೀಪಾವಳಿ ವೇಳೆ ನಡೆಯುವ ಗ್ರಾಮದ ಅಂಕನಾಥೇಶ್ವರಿ ಜಾತ್ರೆಯಲ್ಲಿ ಕೊಂಡ ಹಾಕುತ್ತಾರೆ. ಹರಕೆ ಹಣ, ಆಭರಣ, ಸೀರೆಗಳನ್ನು ಅಗ್ನಿಗೆ ಸಮರ್ಪಿಸಿ ನಮಸ್ಕರಿಸುವ ವಿಭಿನ್ನ ಆಚರಣೆಯೊಂದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಕೊಂಡಕ್ಕೆ ಹರಕೆ ಸಮರ್ಪಿಸಿದ ಚಾಮರಾಜನಗರ ಜನತೆ

ಇದನ್ನೂ ಓದಿ:ಮರಿಗಳನ್ನು ರಕ್ಷಿಸಲು ಹೋಗಿ ನಾಗರ ಹಾವಿನಿಂದ ಕಚ್ಚಿಸಿಕೊಂಡ ತಾಯಿ ಶ್ವಾನಕ್ಕೆ ಯಶಸ್ವಿ ಚಿಕಿತ್ಸೆ

ದೇವರಿಗೆ ಹರಕೆ ಕಟ್ಟಿಕೊಂಡು, ಇಷ್ಟಾರ್ಥ ಈಡೇರಿದರೆ ಹರಕೆಯನ್ನು ಹುಂಡಿಗೆ ಹಾಕುವುದಿಲ್ಲ. ಬದಲಾಗಿ ದೇವಸ್ಥಾನದ ಮುಂದೆ ವರ್ಷಕ್ಕೊಂದು ಬಾರಿ ಹಾಕುವ ಕೊಂಡಕ್ಕೆ ಸಮರ್ಪಿಸುತ್ತಾರೆ. ಜಾನುವಾರುಗಳನ್ನು ಕೂಡ ಕೊಂಡ ಹಾಯಿಸದೇ ಒಂದು ಸುತ್ತು ಬರುತ್ತಾರೆ.

ಎರರಡೂ ವರ್ಷವಾದರೂ ಕಳ್ಳಿ ಗಿಡ ಹಸಿರು:

ದೇವಸ್ಥಾನದ ಅವರಣದಲ್ಲಿ ಕಳ್ಳಿ ಗಿಡ ಕಟ್ಟಲಿದ್ದು, ಅದು ಎರಡು ವರ್ಷವಾದರೂ ಹಸಿರು ಬಣ್ಣದಲ್ಲೇ ಇರಬೇಕು. ಇಲ್ಲವಾದಲ್ಲಿ, ಗ್ರಾಮಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಇದೆ. ಇದು ಗ್ರಾಮದಲ್ಲಿ ನಡೆದುಬಂದ ನೂರಾರು ವರ್ಷಗಳ ಸಂಪ್ರದಾಯವಾಗಿದ್ದು, ಇಂದಿಗೂ ಮುಂದುವರಿದಿದೆ.

ABOUT THE AUTHOR

...view details