ಕರ್ನಾಟಕ

karnataka

ETV Bharat / state

ಕೋವಿಡ್ ಮುಕ್ತಿಗಾಗಿ ಪಂಚಮುಖಿ ಹನುಮನಿಗೆ ವಿಶೇಷ ಪೂಜೆ - ಚಾಮರಾಜನಗರದ ದೇವಸ್ಥಾನಗಳು ಬಂದ್

ರಾಮನವಮಿಯ ಪ್ರಯುಕ್ತ ಮತ್ತು ಕೋವಿಡ್​ನಿಂದ ಮುಕ್ತಿಗಾಗಿ ಚಾಮರಾಜನಗರದಲ್ಲಿ ಪಂಚಮುಖಿ ಹನುಮನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

Special Pooja at Panchamuki Hanuman Temple
ಕೋವಿಡ್ ಮುಕ್ತಿಗಾಗಿ ಪಂಚಮುಖಿ ಹನುಮನಿಗೆ ವಿಶೇಷ ಪೂಜೆ

By

Published : Apr 21, 2021, 1:41 PM IST

ಚಾಮರಾಜನಗರ : ಕೋವಿಡ್ ಮಹಾಮಾರಿ ತೊಲಗಲೆಂದು ರಾಮನವಮಿಯ ದಿನವಾದ ಇಂದು ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪದ ಪಂಚಮುಖಿ ಹನುಮನಿಗೆ ವಿಶೇಷ ಪೂಜೆ ನಡೆಸಲಾಯಿತು.

ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ವಿಳ್ಯದೆಲೆಯ ವಿಶೇಷ ಅಲಂಕಾರ ಮಾಡಿ ಕೊರೊನಾ ಸೋಂಕು ಮುಕ್ತಿಗಾಗಿ ಅರ್ಚಕರಾದ ಜಗದೀಶ್ವರಿ ಪ್ರಾರ್ಥಿಸಿದರು. ದೇವಾಲಯಗಳಿಗೆ ಭಕ್ತರಿಗೆ ನಿರ್ಬಂಧ ಇರುವುದರಿಂದ ಕೇವಲ ಅರ್ಚಕರಷ್ಟೇ ಪೂಜೆ ಸಲ್ಲಿಸಿದರು.

ಕೋವಿಡ್ ಮುಕ್ತಿಗಾಗಿ ಪಂಚಮುಖಿ ಹನುಮನಿಗೆ ವಿಶೇಷ ಪೂಜೆ

ದೇವಾಲಯಗಳಿಗೆ ಪ್ರವೇಶ ನಿರ್ಬಂಧ: ಮಲೆಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ದೇವಾಸ್ಥಾನ ಸೇರಿದಂತೆ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ‌.‌

ABOUT THE AUTHOR

...view details