ಕರ್ನಾಟಕ

karnataka

ETV Bharat / state

ರಾಷ್ಟ್ರಪತಿಗಳಿಂದ ಸಿಮ್ಸ್ ಆಸ್ಪತ್ರೆ ಲೋಕಾರ್ಪಣೆ: ಕರ್ನಾಟಕ, ಮೈಸೂರು ಒಡೆಯರ್ ನೆನೆದ ಕೋವಿಂದ್ - ಚಾಮರಾಜನಗರಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ

ಚಾಮರಾಜನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಸಿಮ್ಸ್​ನ ಬೋಧನಾ ಆಸ್ಪತ್ರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಲೋಕಾರ್ಪಣೆ ಮಾಡಿದರು.

Speaker Ram Nath Kovind inaugurated sims hospital
ರಾಷ್ಟ್ರಪತಿಗಳಿಂದ ಸಿಮ್ಸ್ ಆಸ್ಪತ್ರೆ ಲೋಕಾರ್ಪಣೆ

By

Published : Oct 7, 2021, 8:11 PM IST

ಚಾಮರಾಜನಗರ:ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಸಿಮ್ಸ್​ನ 450 ಹಾಸಿಗೆಗಳ ಬೋಧನಾ ಆಸ್ಪತ್ರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಲೋಕಾರ್ಪಣೆ ಮಾಡಿದರು.

ಸಿಮ್ಸ್ ಆಸ್ಪತ್ರೆ ಉದ್ಘಾಟನಾ ಸಮಾರಂಭ

ಆಸ್ಪತ್ರೆ ಉದ್ಘಾಟಿಸಿ ಬಳಿಕ ಕೋವಿಂದ್ ಕನ್ನಡದಲ್ಲಿ ಮಾತನಾಡಿ, ನನಗೆ ಕರ್ನಾಟಕಕ್ಕೆ ಬರಲು ತುಂಬಾ ಇಷ್ಟ, ನಿಮ್ಮ ಜೊತೆ ಇರಲು ತುಂಬಾ ಸಂತೋಷ ಎಂದು ಕನ್ನಡದಲ್ಲೇ ಮಾತು ಆರಂಭಿಸಿ ಗಮನ ಸೆಳೆದರು. ನವರಾತ್ರಿ ಆರಂಭದ ಶುಭ ಸಮಯದಲ್ಲಿ ಆಸ್ಪತ್ರೆ ಉದ್ಘಾಟನೆಯಾಗುತ್ತಿದ್ದು, ಎಲ್ಲರಿಗೂ ಈ ಕೇಂದ್ರ ಉತ್ತಮ‌ ಸೇವೆ‌ ನೀಡಲಿ ಎಂದು ಶುಭ ಹಾರೈಸಿದರು.

ಚಾಮರಾಜ ಒಡೆಯರ್ ಮತ್ತು ಚಾಮರಾಜೇಶ್ವರ ದೇವರನ್ನು ನೆನೆದ ಕೋವಿಂದ್, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮೈಸೂರು ಮಹಾರಾಜರು ಆಡಳಿತ ನಡೆಸಿದರು. ಒಡೆಯರ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು 1881ರಲ್ಲಿ ಬಾಲಕಿಯರ ಶಾಲೆ ಆರಂಭಿಸಿದರು.‌ ಸ್ವಾಮಿ ವಿವೇಕಾನಂದರು ಸರ್ವ ಧರ್ಮ ಸಮ್ಮೇಳನಕ್ಕೆ ತೆರಳಲು ನೆರವಾದರು.‌ ಜಯಚಾಮರಾಜ ಒಡೆಯರ್ ಸ್ವಾತಂತ್ರ್ಯ ಭಾರತಕ್ಕೆ ಸಂಸ್ಥಾನ ಸೇರಿಸಿದ ಮೊದಲ ರಾಜರು. ವೈದ್ಯಕೀಯ ವಿದ್ಯಾರ್ಥಿಗಳು‌ ಮೈಸೂರು ಮಹಾರಾಜರ ದೃಷ್ಟಿಕೋನದಂತೆ‌ ಮಾಮವೀಯ ಮೌಲ್ಯ, ಸೇವಾ ಬದ್ಧತೆ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕೆಂದರು.

ಸಿಮ್ಸ್ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು

ಸಿಮ್ಸ್ ನ 750 ವಿದ್ಯಾರ್ಥಿಗಳಲ್ಲಿ 100 ಮಂದಿ ಕಾಶ್ಮೀರ,‌ ಈಶಾನ್ಯ ರಾಜ್ಯ, ಉತ್ತರ ಭಾರತದಿಂದ ಬಂದಿದ್ದಾರೆ. ನನಗೆ ಈ ಕಾಲೇಜು ಮಿನಿ‌ ಇಂಡಿಯಾದಂತೆ ಗೋಚರವಾಗುತ್ತದೆ. 750 ವಿದ್ಯಾರ್ಥಿಗಳಲ್ಲಿ 300 ಮಂದಿ ಮಹಿಳೆಯರಾಗಿದ್ದು, ನರ್ಸಿಂಗ್ ವಿಭಾಗದಲ್ಲಿ ಶೇ.60 ರಷ್ಟು ವಿದ್ಯಾರ್ಥಿನಿಯರಿರುವುದು 21ನೇ ಶತಮಾನದ ಭಾರತದ ಅಭಿವೃದ್ಧಿ ಪಥ ಸೂಚಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳನ್ನು ಸನ್ಮಾನಿಸಿದ ಸಿಎಂ ಬೊಮ್ಮಾಯಿ

ಒಂದು ತಾಸು ಕಾರ್ಯಕ್ರಮ:

4.20ಕ್ಕೆ ಆರಂಭಗೊಂಡ ಕಾರ್ಯಕ್ರಮ 5.20ಕ್ಕೆ ಮುಕ್ತಾಯಗೊಂಡಿತ್ತು.‌ ರಾಷ್ಟ್ರಪತಿಗಳೊಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಸಚಿವರಾದ ಸುಧಾಕರ್ ಮತ್ತು ಸೋಮಶೇಖರ್ ವೇದಿಕೆ ಹಂಚಿಕೊಂಡಿದ್ದರು. ಸಿಮ್ಸ್ ಕಟ್ಟಡದ ಪ್ರತಿಕೃತಿ ಇರುವ ಸ್ಮರಣಿಕೆ,ರೇಷ್ಮೆ ಶಾಲನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಸವಿತಾ ಕೋವಿಂದ್ ಅವರಿಗೆ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: Video: ರಾಷ್ಟ್ರಪತಿಗೆ ಜೈಕಾರ - ಕಾರು ನಿಲ್ಲಿಸಿ ಹಾಡಿ ಮಕ್ಕಳತ್ತ ಕೈ ಬೀಸಿ, ನಗೆ ಚೆಲ್ಲಿದ ರಾಮನಾಥ್ ಕೋವಿಂದ್

ABOUT THE AUTHOR

...view details