ಕರ್ನಾಟಕ

karnataka

ETV Bharat / state

ಬೈಕ್ ಸವಾರನಿಗೆ ಒದೆಯಲು ಹೋದ ASI ಅಮಾನತು - ಪೊಲೀಸ್​ ಅಮಾನತು

ಬೈಕ್ ಸವಾರನಿಗೆ ನಿಂದಿಸಿ, ಒದೆಯಲು ಹೋದ ಎಎಸ್ಐ ಅವರನ್ನು ಅಮಾನತು ಮಾಡಿ ಎಸ್​ಪಿ ಆದೇಶ ಮಾಡಿದ್ದಾರೆ. ​

ಪಿಎಸ್ಐ ಅಮಾನತು
ಪಿಎಸ್ಐ ಅಮಾನತು

By

Published : Jun 2, 2021, 8:41 PM IST

ಕೊಳ್ಳೇಗಾಲ: ಔಷಧ ಚೀಟಿ ಹಿಡಿದು ಬಂದ ಯುವಕನೊಬ್ಬನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಒದೆಯಲು ಮುಂದಾಗಿದ್ದ ಎಎಸ್​ಐ ರಾಮಸ್ವಾಮಿ ಅವರನ್ನು ಎಸ್​ಪಿ ದಿವ್ಯಸಾರಾಥಾಮಸ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಕೊಳ್ಳೇಗಾಲದಲ್ಲಿ ಮೇ23ರಂದು ಬೆಳಗ್ಗೆ ಯುವಕನ ಮೇಲೆ ಎಎಸ್​ಐ ರಾಮಸ್ವಾಮಿ ಹಲ್ಲೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ, ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು.

ಬೈಕ್​ ಸವಾರನಿಗೆ ಒದೆಯಲು​​ ಮುಂದಾದ ಎಎಸ್​ಐ​​​
ಈ ಸಂಬಂಧ ಡಿವೈಎಸ್ಪಿ ನಾಗರಾಜು ಹಾಗೂ ಸರ್ಕಲ್ ಇನ್ಸ್​ಪೆಕ್ಟರ್ ಶಿವರಾಜು.ಬಿ.ಮುಧೋಳ್ ಅವರು ಎಸ್​​ಪಿಗೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಎಸ್ಐ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ABOUT THE AUTHOR

...view details