ಕರ್ನಾಟಕ

karnataka

ETV Bharat / state

ಗಡಿಯ ಚೆಕ್​ಪೋಸ್ಟ್​ಗಳಿಗೆ ಎಸ್​ಪಿ ಭೇಟಿ: ಮಾಸ್ಕ್ ಧರಿಸಿ, ಅಂತರದಿಂದ ಕೆಲಸ ಮಾಡುವಂತೆ ಸಲಹೆ - kollegala checkposts

ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆ ಕೊಳ್ಳೇಗಾಲ ಗಡಿಗಳಲ್ಲಿ ಎರಡು ಚೆಕ್​ಪೋಸ್ಟ್ ತೆರೆಯಲಾಗಿದ್ದು ಜಿಲ್ಲಾ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿದ್ದಾರೆ.

checkpost
checkpost

By

Published : Apr 28, 2021, 9:29 PM IST

ಕೊಳ್ಳೇಗಾಲ: ಕೊರೊನಾ ಕರ್ಫ್ಯೂ ಹಿನ್ನೆಲೆ ಕೊಳ್ಳೇಗಾಲ ಗಡಿಗಳಲ್ಲಿ ಎರಡು ಚೆಕ್​ಪೋಸ್ಟ್ ತೆರೆಯಲಾಗಿದ್ದು, ಜಿಲ್ಲಾ ವರಿಷ್ಠಾಧಿಕಾರಿ ದಿವ್ಯಾ ಸಾರಾಥಾಮಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಲೂಕಿನ ಮೈಸೂರು ಮಾರ್ಗ ಮಧ್ಯ ಸಿಗುವ ಟಗರಪುರದಲ್ಲಿ ಒಂದು ಚೆಕ್​ಪೋಸ್ಟ್ ಹಾಗೂ ಸತ್ತೇಗಾಲದ ಹ್ಯಾಂಡ್ ಪೋಸ್ಟ್ ನಲ್ಲಿ ಮತ್ತೊಂದು ಚೆಕ್ ಪೋಸ್ಟ್ ತೆರೆಯಲಾಗಿದ್ದು ಇಂದು ಜಿಲ್ಲಾ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿ ಪರೀಶಿಲನೆ ನಡೆಸಿದ ಬಳಿಕ ಪೊಲೀಸರಿಗೆ ಕೆಲ ಸೂಚನೆ ನೀಡಿದ್ದಾರೆ.

ಅಗತ್ಯ ವಸ್ತುಗಳ ಸಾಗಣೆ ವಾಹನಗಳು, ತುರ್ತು ಆರೋಗ್ಯ ವಾಹನಗಳು, ಆ್ಯಂಬುಲೆನ್ಸ್​ಗಳು ಸೇರಿದಂತೆ ಪಾಸ್ ಹೊಂದಿದವರಿಗೆ ಮಾತ್ರ ಜಿಲ್ಲೆಯ ಒಳಗೆ ಬರುವ ಅವಕಾಶ ನೀಡಬೇಕು. ಬರುವವರು ಮಾಸ್ಕ್ ಧರಿಸಿದ್ದಾರೆಯೇ, ಅಂತರ ಕಾಯ್ದುಕೊಂಡಿದ್ದಾರೆಯೇ ಎಂದು ನೋಡಬೇಕು. ನಿಯಮ ಉಲಂಘಸಿದವರಿಗೆ ದಂಡ ಹಾಕಬೇಕು ಎಂದು ಸೂಚನೆ ನೀಡಿದರು. ಈ ವೇಳೆ ವೃತ್ತ ನೀರಿಕ್ಷಕ ಶಿವರಾಜು.ಬಿ‌.ಮುಧೋಳ್, ಗ್ರಾಮಾಂತರ ಸಬ್ ಇನ್ಸ್​ಪೆಕ್ಟರ್ ವಿ.ಸಿ ಅಶೋಕ್ ಮತ್ತಿತ್ತರಿದ್ದರು.

ABOUT THE AUTHOR

...view details