ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಬಿತ್ತನೆ ಕಾರ್ಯ ಚುರುಕು: ಬೀಳುಭೂಮಿ ಕೃಷಿಗೆ ವರವಾಗುವುದೇ ಕ್ಲೋಸ್ ಡೌನ್!

ಚಾಮರಾಜನಗರದಲ್ಲಿ ಪೂರ್ವ ಮುಂಗಾರಿನಲ್ಲಿ ಶಕ್ತಿಮಾನ್ ಜೋಳ, ಅಲಸಂದೆ, ಸೂರ್ಯಕಾಂತಿ, ಹುಚ್ಚೆಳ್ಳು, ಹತ್ತಿ ಸೇರಿದಂತೆ 11 ಬೆಳೆಗಳನ್ನು ಜಿಲ್ಲೆಯ ರೈತರು ಹಾಕಲಿದ್ದು ಬಿತ್ತನೆ ಕಾರ್ಯ ನಡೆಯುತ್ತಿದೆ‌.‌

By

Published : May 1, 2021, 2:30 AM IST

Sowing work start  in Chamarajanagar
ಚಾಮರಾಜನಗರದಲ್ಲಿ ಬಿತ್ತನೆ ಕಾರ್ಯ ಚುರುಕು

ಚಾಮರಾಜನಗರ: ವಾಡಿಕೆಯಂತೆ ಪೂರ್ವ ಮುಂಗಾರು ಮಳೆಯಾಗಿರುವುದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು ಕ್ಲೋಸ್​​ಡೌನ್ ಪರಿಣಾಮ ಬೀಳು ಭೂಮಿಯಲ್ಲೂ ಕೃಷಿ ಚಟುವಟಿಕೆ ಗರಿಗೆದರುವ ನೀರಿಕ್ಷೆ ಹುಟ್ಟುಹಾಕಿದೆ.

ಕೊಳ್ಳೇಗಾಲ ತಾಲೂಕಿನ ಕೆಲವೆಡೆ ಹೊರತುಪಡಿಸಿದರೇ ಜಿಲ್ಲಾದ್ಯಂತ ವಾಡಿಕೆಯಂತೆ ಮಳೆಯಾಗಿದ್ದು ಬಿತ್ತನೆ ಕಾರ್ಯ ನಡೆಯುತ್ತಿದೆ‌. ಒಟ್ಟು 56035 ಹೆಕ್ಟೇರ್ ಪ್ರದೇಶದಲ್ಲೀಗ ಈಗ 5260 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಈಗಾಗಲೇ 16 ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಅವರಿಂದ ಮಾಹಿತಿ .....

ಪೂರ್ವ ಮುಂಗಾರಿನಲ್ಲಿ ಶಕ್ತಿಮಾನ್ ಜೋಳ, ಅಲಸಂದೆ, ಸೂರ್ಯಕಾಂತಿ, ಹುಚ್ಚೆಳ್ಳು, ಹತ್ತಿ ಸೇರಿದಂತೆ 11 ಬೆಳೆಗಳನ್ನು ಜಿಲ್ಲೆಯ ರೈತರು ಹಾಕಲಿದ್ದು ಬಿತ್ತನೆ ಕಾರ್ಯ ನಡೆಯುತ್ತಿದೆ‌.‌ ಕಳೆದ ವರ್ಷದಂತೆ ಈ ಬಾರಿಯೂ ಉತ್ತಮ ಬಿತ್ತನೆ ಕಾರ್ಯ ನಡೆಯುವ ವಾತಾವರಣ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೀಳು ಭೂಮಿಯಲ್ಲಿ ಬಿತ್ತನೆ:

ಕಳೆದ ವರ್ಷ ಕೊರೊನಾ ಲಾಕ್ಡೌನ್ ಪರಿಣಾಮ ತಮ್ಮ ಗ್ರಾಮಗಳಿಗೆ ಗುಳೆ ಬಂದಿದ್ದ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಕೃಷಿ ಇಲಾಖೆಯು ಗುರಿ ಮೀರಿದ ಸಾಧನೆ ಮಾಡಿತ್ತು. ಅದರಂತೆ, ಈ ಬಾರಿಯೂ ಪೂರ್ವ ಮುಂಗಾರಿನ ಬಿತ್ತನೆ ಸಮಯದಲ್ಲೇ ಕ್ಲೊಸ್ ಡೌನ್ ಆರಂಭವಾಗಿದ್ದು ಸಾವಿರಾರು ಮಂದಿ ಗ್ರಾಮಗಳಿಗೆ ಹಿಂತಿರುಗಿದವರು ಕೃಷಿಯಲ್ಲಿ ತೊಡಗಿಕೊಳ್ಳುವ ಆಶಾಭಾವನೆ ವ್ಯಕ್ತವಾಗಿದೆ.

ಬೀಳು ಬಿದ್ದಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆ ಈ ಬಾರಿಯೂ ನಡೆಯುವ ವಿಶ್ವಾಸ ಇಲಾಖೆಯದ್ದಾಗಿದ್ದು ಕಾರ್ಮಿಕರಾಗಿ ದುಡಿಯುತ್ತಿದ್ದವರು ಮತ್ತೇ ರೈತರಾಗಿ ತಮ್ಮ ಜಮೀನಿನಲ್ಲಿ ಉಳುಮೆ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ ಎನ್ನುತ್ತಾರೆ ಜೆಡಿ ಚಂದ್ರಕಲಾ.

ABOUT THE AUTHOR

...view details