ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ನದಿಯಲ್ಲಿ ಮಗುಚಿದ ಎತ್ತಿನಗಾಡಿ, ನೀರು ಪಾಲಾದ ಬಾಲಕ - ತಂದೆ ಎದುರೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಮಗ

ತಂದೆಯ ಎದುರೇ ಮಗ ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋದ ಘಟನೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದಲ್ಲಿ ನಡೆಯಿತು.

The son washed up in the river Kaveri in front of his father
ತಂದೆ ಎದುರೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಮಗ

By

Published : May 6, 2022, 7:11 AM IST

ಕೊಳ್ಳೇಗಾಲ: ತಂದೆಯೊಡನೆ ಎತ್ತಿನ ಗಾಡಿ ತೊಳೆಯಲು ನದಿಗೆ ತೆರಳಿದ ಬಾಲಕ ನೀರು ಪಾಲಾಗಿರುವ ಘಟನೆ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಕಾವೇರಿ ನದಿಯಲ್ಲಿ ಜರುಗಿದೆ. 8ನೇ ತರಗತಿ ವಿದ್ಯಾರ್ಥಿ ಮನು (14) ಮೃತ ದುರ್ದೈವಿ. ಬಾಲಕನ ತಂದೆ ಬಸವರಾಜು ಅವರ ಕರು ಮೃತಪಟ್ಟಿದ್ದು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಕಾವೇರಿ ನದಿ ತಟದಲ್ಲಿ ಮಣ್ಣು ಮಾಡಿದ್ದಾರೆ. ಆ ಬಳಿಕ ವಾಪಸ್ಸಾಗುವಾಗ ನದಿಗಿಳಿದು ಎತ್ತಿನಗಾಡಿ ತೊಳೆಯಲು ಹೋಗಿದ್ದಾರೆ.

ಆಗ ಎತ್ತಿನಗಾಡಿ ಮಗುಚಿದ್ದು ಬಾಲಕ ನದಿಗೆ ಬಿದ್ದು ಕೊಚ್ಚಿ ಹೋಗಿದ್ದಾನೆ. ಘಟನೆಯಲ್ಲಿ ಒಂದು ಎತ್ತು ಸಹ ಮೃತಪಟ್ಟಿದೆ. ವಿಷಯ ತಿಳಿದ ಪಟ್ಟಣ ಠಾಣೆಯ ಪೊಲೀಸರು ಗ್ರಾಮಸ್ಥರೊಡನೆ ಕೊಪ್ಪರಿಕೆಗಳ ಮೂಲಕ ಸ್ಥಳಕ್ಕಾಗಮಿಸಿ ನೀರುಪಾಲದ ಬಾಲಕನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಪ್ರಕರಣ-2: ಬೈಕ್​ಗೆ ಕಾರು-ಡಿಕ್ಕಿ ಸವಾರ ಸಾವು: ಬೈಕ್​ಗೆ ಕಾರು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸತ್ತೇಗಾಲದ ಗ್ರಾಮದಲ್ಲಿ ಜರುಗಿದೆ. ಕೆಂಪನಪಾಳ್ಯ ಗ್ರಾಮದ ನಾಗಸುಂದರ್ ಎಂಬುವರ ಮಗ ಮನೋಜ್ ಕುಮಾರ್(23) ಮೃತಪಟ್ಟವರು. ಇವರು ಬೆಂಗಳೂರಿಗೆ ಬೆಳಗ್ಗೆ ಬೈಕ್​ನಲ್ಲಿ ತೆರಳುವಾಗ ಸತ್ತೇಗಾಲ ಗ್ರಾಮದ 209 ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನ‌ ಕಡೆಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ‌.


ಇದನ್ನೂ ಓದಿ:ನಾದಿನಿ ಜೊತೆ ಸಂಬಂಧ, ಸುತ್ತಾಟ.. ಬರ್ತ್​ಡೇ ಆಚರಣೆ ಫೋಟೊ ಶೇರ್​ ಮಾಡಿದ ಪತ್ನಿಯನ್ನೇ ಕೊಂದ ಪತಿ

ಕಾರು ಚಾಲಕ ಪಿಜಿ ಪಾಳ್ಯದ ಸಂದೀಪ್‌ಗೂ ಗಾಯವಾಗಿದ್ದು, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

For All Latest Updates

TAGGED:

ABOUT THE AUTHOR

...view details