ಕರ್ನಾಟಕ

karnataka

By

Published : Apr 19, 2023, 1:24 PM IST

ETV Bharat / state

ಚಾಮರಾಜನಗರದಲ್ಲಿಂದು ಸೋಮಣ್ಣ ನಾಮಪತ್ರ ಸಲ್ಲಿಕೆ: ಟೆಂಪಲ್ ರನ್, ಬೃಹತ್ ಸಮಾವೇಶ

ವಸತಿ ಸಚಿವ ವಿ ಸೋಮಣ್ಣ ಇಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

somanna
ಸೋಮಣ್ಣ

ಚಾಮರಾಜನಗರದಲ್ಲಿ ಮಾತನಾಡಿದ ವಿ ಸೋಮಣ್ಣ

ಚಾಮರಾಜನಗರ: ವರುಣಾ ಬಳಿಕ ಚಾಮರಾಜನಗರದಲ್ಲಿ ಇಂದು ಸಚಿವ ಸೋಮಣ್ಣ ನಾಮಪತ್ರ ಸಲ್ಲಿಸುತ್ತಿದ್ದಾರೆ‌. ಇಲ್ಲಿನ ಡಾ. ಬಿ ಆರ್ ಅಂಬೇಡ್ಕರ್ ಭವನದ ಸಮೀಪ ಬೃಹತ್ ಬಹಿರಂಗ ಸಭೆ ನಡೆಸಲಿರುವ ವಸತಿ ಸಚಿವ ವಿ ಸೋಮಣ್ಣ ಬಳಿಕ 1.30 ರ ಹೊತ್ತಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಿನೇಷನ್​ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಹಲವು ಮುಖಂಡರ ಮನೆಗೆ ಭೇಟಿ ಕೊಡಲಿದ್ದು, ಕಡಿಮೆ ಅವಧಿಯಲ್ಲಿ ಗೆಲ್ಲುವ ಕಸರತ್ತು ಆರಂಭಿಸಿದ್ದಾರೆ.

ಟೆಂಪಲ್ ರನ್ : ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸುವ ಹಿನ್ನೆಲೆ ಟೆಂಪಲ್ ರನ್ ಆರಂಭಿಸಿದ್ದಾರೆ. ಇಲ್ಲಿನ ಕೊಳದ ಗಣಪತಿ ದೇವಾಲಯ, ಚಾಮರಾಜೇಶ್ವರ ದೇವಾಲಯ, ಮಾರಮ್ಮ ದೇಗುಲ ಹಾಗೂ ಆದಿಶಕ್ತಿ ದೇವಾಲಯಗಳಿಗೆ ಬೆಂಬಲಿಗರ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ವಸತಿ ಸಚಿವ ವಿ ಸೋಮಣ್ಣ ಟೆಂಪಲ್ ರನ್

ಇದನ್ನೂ ಓದಿ :ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರತಿಸ್ಪರ್ಧಿಯಾಗಿ ವಿ ಸೋಮಣ್ಣ ನಾಮಪತ್ರ ಸಲ್ಲಿಕೆ.. ಅವರ ಆಸ್ತಿ ವಿವರ ಹೀಗಿದೆ

ಸೋಮಣ್ಣ ಹರಕೆಯ ಕುರಿ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, " ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ನಾನು ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ವೇಳೆ ಪ್ರತಾಪ್​ ಸಿಂಹ, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಜರಿರುತ್ತಾರೆ. ಶ್ರೀನಿವಾಸ ಪ್ರಸಾದ್ ಅವರು ಇಂದು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಎರಡು ದಿನಗಳಿಂದ ಓಡಾಡಿ ಕಾಲು ನೋವಾಗಿದೆ. ಫಿಸಿಯೋಥೆರಪಿಗೆ ಹೋಗುತ್ತಿದ್ದೇನೆ, ಎರಡು ದಿನಗಳ ನಂತರ ಚಾಮರಾಜನಗರ ಮತ್ತು ವರುಣಾಕ್ಕೆ ಬಂದು ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ " ಎಂದರು.

ಇದನ್ನೂ ಓದಿ :ಕೆಲವರ ಮಾತಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ : ಸಚಿವ ವಿ.ಸೋಮಣ್ಣ ಗರಂ

ಇನ್ನು ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಸಹ 25 ರ ಒಳಗೆ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ರಾಷ್ಟ್ರದ ನಾಯಕರು ಎರಡು ಕ್ಷೇತ್ರಗಳಿಗೆ ಆಗಮಿಸುವ ಸಂಭವವಿದೆ. ಚುನಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಇನ್ನೊಂದೆಡೆ, ವರುಣಾ ಕ್ಷೇತ್ರಕ್ಕೆ ಸೋಮಣ್ಣನಾದರೂ ಬರಲಿ, ಬೇರೆ ಯಾರಾದರೂ ಬರಲಿ ನಾನು ಗೆದ್ದೇ ಗೆಲ್ಲುತ್ತೇನೆ. ಯಾವತ್ತೂ ಎದುರಾಳಿ ಯಾರೆಂದು ನೋಡುವುದಿಲ್ಲ. ನನಗೆ ಮತದಾರರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸಿದ್ದರಾಮಯ್ಯನವರನ್ನು ಗೆಲ್ಲಿಸಬೇಕೆಂದು ಮತದಾರರು ತೀರ್ಮಾನ ಮಾಡಿದ್ದಾರೆ. ಸಚಿವ ಸೋಮಣ್ಣ ಈಗ ಪ್ರಚಾರಕ್ಕೆ ಬಂದಿದ್ದಾರೆ. ನನ್ನ ಮಗ ಈಗಾಗಲೇ ಪ್ರಚಾರ ಮಾಡಿ ಮುಗಿಸಿದ್ದಾನೆ. ಈ ಬಾರಿ ವರುಣಾದಲ್ಲಿ ಹಣದ ಹೊಳೆಯನ್ನೇ ಹರಿಸಲಿ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಸೋಮಣ್ಣನಾದ್ರೂ ಬರಲಿ, ಯಾರಾದ್ರೂ ಬರಲಿ ವರುಣಾದಲ್ಲಿ ಗೆಲುವು ನನ್ನದೇ: ಸಿದ್ದರಾಮಯ್ಯ

ABOUT THE AUTHOR

...view details