ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಪಾಲನೆ ಸಾಮಾಜಿಕ ಜವಾಬ್ದಾರಿಯಾಗಲಿ: ಚಾಮರಾಜನಗರ ಡಿಸಿ

ಹಸಿರು ವಲಯದಲ್ಲೇ ಕೊರೊನಾ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಆದಷ್ಟು ಜನರು ಮುಂಜಾಗ್ರತೆ ವಹಿಸಿ ಚಾಮರಾಜನಗರವನ್ನು ಹಸಿರು ವಲಯವನ್ನಾಗಿಯೇ ಕಾಪಾಡಿಕೊಳ್ಳಬೇಕಿದೆ ಎಂದು ಡಿಸಿ ಡಾ. ಎಂ.ಆರ್.ರವಿ ಮನವಿ ಮಾಡಿದ್ದಾರೆ.

By

Published : May 13, 2020, 5:48 PM IST

Chamarajanagar DC
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ಚಾಮರಾಜನಗರ: ಸಾಮಾಜಿಕ ಅಂತರವೆಂಬುದು ಸಾಮಾಜಿಕ ಜವಾಬ್ದಾರಿಯಾಗಬೇಕು. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ
ವಿಡಿಯೋ ಮಾಡಿ ಸಂದೇಶ ನೀಡಿರುವ ಅವರು, ಕೆಲ ಹಸಿರು ವಲಯದಲ್ಲೇ ಕೊರೊನಾ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಆದಷ್ಟು ಜನರು ಮುಂಜಾಗ್ರತೆ ವಹಿಸಿ ಚಾಮರಾಜನಗರವನ್ನು ಹಸಿರು ವಲಯವನ್ನಾಗಿಯೇ ಕಾಪಾಡಿಕೊಳ್ಳಬೇಕಿದೆ. ಬೇರೆ ರಾಜ್ಯಗಳಿಂದ 300ಕ್ಕೂ ಹೆಚ್ಚು ಜಿಲ್ಲೆಯ ಜನರು ತವರಿಗೆ ಬರಲು ನೋಂದಾಯಿಸಿಕೊಂಡಿದ್ದು, ಹೈ ರಿಸ್ಕ್ ಪ್ರದೇಶ, ರೆಡ್ ಝೋನ್ ಪ್ರದೇಶಗಳಿಂದ ಅವರು ಬರಲು ನಾನು ಅನುಮತಿ ನೀಡಿಲ್ಲ. ಹೊರ ಜಿಲ್ಲೆಗಳಿಂದ 1700 ಮಂದಿ ಈಗಾಗಲೇ ಜಿಲ್ಲೆಗೆ ಬಂದಿದ್ದಾರೆ. ಅವರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಯಾರಿಗೂ ರೋಗ ಲಕ್ಷಣಗಳಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಆರ್ಥಿಕ ಚಟುವಟಿಕೆ‌ ನಡೆಸುವಾಗ ಬಹಳ ಎಚ್ಚರಿಕೆಯಿಂದ ವರ್ತಿಸಿ. ಸ್ವ-ಸೇನಾನಿಗಳಾಗಿ ಕೊರೊನಾ ವಿರುದ್ಧ ಹೋರಾಡೋಣ. ಸಾಮಾಜಿಕ ಜವಾಬ್ದಾರಿ ಅರಿತು ಸಾಮಾಜಿಕ ಅಂತರ ಕಾಪಾಡಿ ಎಂದು ಅವರು ಕೋರಿದ್ದಾರೆ.

ABOUT THE AUTHOR

...view details