ಚಾಮರಾಜನಗರ: ಶಾಲಾವರಣದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ಹಾವು ಕಡಿದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಆಲಂಬೂರು ಗ್ರಾಮದ ರಾಹುಲ್ (09) ಮೃತ ದುರ್ದೈವಿ. ಅಜ್ಜಿಯ ಊರಾದ ನಿಟ್ರೆಯಲ್ಲಿ ಓದುತ್ತಿದ್ದ ರಾಹುಲ್ ಶಾಲೆಗೆ ರಜೆ ಇದ್ದಿದ್ದರಿಂದ ಆಟವಾಡಲು ಶಾಲಾವರಣಕ್ಕೆ ತೆರಳಿದ್ದ ವೇಳೆ ಹಾವೊಂದು ಕಚ್ಚಿದೆ ಎನ್ನಲಾಗಿದೆ.