ಚಾಮರಾಜನಗರ : ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರಕ್ಕೆ ದೇವಾಲಯಕ್ಕೆ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಭೇಟಿ ನೀಡಿದರು.
ಮಲೆ ಮಹದೇಶ್ವರ ಎಸ್.ಎಂ.ಕೃಷ್ಣ ಅವರ ಮನೆ ದೇವರಾಗಿದ್ದು, ತಮ್ಮ ಅಳಿಯನ ಮರಣದ ಬಳಿಕ ಒಮ್ಮೆ ಮಾತ್ರ ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಎರಡು ವರ್ಷದ ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ಎಸ್ಎಂಕೆ ಭೇಟಿ ನೀಡಿದ್ದು, ಮಧ್ಯಾಹ್ನದ ಮಹಾ ಮಂಗಳಾರತಿಯಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.