ಕರ್ನಾಟಕ

karnataka

ETV Bharat / state

ನಿವೇಶನ ಸಮಸ್ಯೆ.. ಮಾತಿಗೆ ಮನ್ನಣೆ ನೀಡದ 6 ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ - 6 ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ

ನಿವೇಶನದ ಎಲ್ಲಾ ದಾಖಲೆಗಳು ತಮ್ಮ ಕುಟುಂಬದ ಹೆಸರಿನಲ್ಲಿದ್ದರೂ ಜಾಗದ ಒಂದು ಭಾಗವನ್ನು ನಮ್ಮ ದೊಡ್ಡಪ್ಪ ಅವರಿಗೆ ಬಿಟ್ಟುಕೊಡಬೇಕು ಎಂದು ಪಂಚಾಯತ್‌ನಲ್ಲಿ ಆದೇಶಿಸಿದ್ದಾರೆ. ಇದನ್ನು ಒಪ್ಪದಿದ್ದ ನಮಗೆ ಬಹಿಷ್ಕಾರ ಹಾಕಲಾಗಿದೆ ಎಂದು ಬಡಾವಣೆಯ ರವಿ ಎಂಬುವರು ದೂರಿದ್ದಾರೆ..

6 ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ
Site issues : Social Boycott on 6 Dalit Families in Chamarajanagar

By

Published : Apr 2, 2021, 1:13 PM IST

ಚಾಮರಾಜನಗರ :ಅಣ್ಣ-ತಮ್ಮಂದಿರ ನಡುವಿನ ಖಾಲಿ‌‌ ನಿವೇಶನ ಹಾಗೂ ಇತರೆ ಜಾಗದ ಸಮಸ್ಯೆಯ ಇತ್ಯರ್ಥಕ್ಕಾಗಿ ಬಂದ ಗ್ರಾಮಸ್ಥರ ಮಾತಿಗೆ ಮನ್ನಣೆ ನೀಡದಿದ್ದಕ್ಕೆ 6 ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜನಗರದ ರಾಮಸಮುದ್ರದಲ್ಲಿ ನಡೆದಿದೆ.

6 ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ..

ನಿವೇಶನದ ಎಲ್ಲಾ ದಾಖಲೆಗಳು ತಮ್ಮ ಕುಟುಂಬದ ಹೆಸರಿನಲ್ಲಿದ್ದರೂ ಜಾಗದ ಒಂದು ಭಾಗವನ್ನು ನಮ್ಮ ದೊಡ್ಡಪ್ಪ ಅವರಿಗೆ ಬಿಟ್ಟುಕೊಡಬೇಕು ಎಂದು ಪಂಚಾಯತ್‌ನಲ್ಲಿ ಆದೇಶಿಸಿದ್ದಾರೆ. ಇದನ್ನು ಒಪ್ಪದಿದ್ದ ನಮಗೆ ಬಹಿಷ್ಕಾರ ಹಾಕಲಾಗಿದೆ ಎಂದು ಬಡಾವಣೆಯ ರವಿ ಎಂಬುವರು ದೂರಿದ್ದಾರೆ.

ಮಾರ್ಚ್‌ 22ರಂದು ನನ್ನ ತಮ್ಮನ ಮದುವೆ ಇತ್ತು. ಆದರೆ, ನಮ್ಮ ಕುಟುಂಬದವರು, ಸ್ನೇಹಿತರನ್ನು ಕಾರ್ಯಕ್ರಮಕ್ಕೆ ಬರಲು ಯಜಮಾನರು ಬಿಡಲಿಲ್ಲ. ಸಂಬಂಧಿಕರು, ಬೀದಿಯವರು ಮೃತಪಟ್ಟರೆ ಅವರ ಸಮಾಧಿಗೆ ಹೋಗುವುದಕ್ಕೂ ನಮ್ಮ ಕುಟುಂಬಗಳಿಗೆ ಅವಕಾಶ ನೀಡುತ್ತಿಲ್ಲ. ಈ ಸಂಬಂಧ ಪೊಲೀಸ್‌ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.

ಬಡಾವಣೆಯಲ್ಲಿ 12 ಮಂದಿ ಯಜಮಾನರಿದ್ದು, ಅವರೆಲ್ಲರೂ ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಿವೇಶನದ ವಿಚಾರವಾಗಿ ನಮ್ಮ ಕುಟುಂಬಗಳು ಮಾತ್ರವಲ್ಲ ಬಡಾವಣೆಯ ಇತರೆ ನಿವಾಸಿಗಳಾದ ಪುಟ್ಟರಂಗಯ್ಯ, ನಂಜಯ್ಯ, ಮಹಾದೇವಯ್ಯ, ಪುಟ್ಟನಂಜಮ್ಮ, ಶಿವಣ್ಣ ಎಂಬುವರ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿದರು.

ABOUT THE AUTHOR

...view details