ಚಾಮರಾಜನಗರ: ಭಾರತದ ಮೇರು ಗಾಯಕಿ ಎಸ್. ಜಾನಕಿ ಅವರು ಗುಂಡ್ಲುಪೇಟೆ ತಾಲೂಕಿನ ತ್ರಯಂಬಕೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಮ್ಮ ಕುಟುಂಬಸ್ಥರೊಂದಿಗೆ ದೇಗುಲಕ್ಕೆ ಭೇಟಿ ನೀಡಿದ ಅವರು, ತ್ರಯಂಬಕೇಶ್ವರ, ಸಪ್ತಮಾತೃಕೆಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ತ್ರಯಂಬಕೇಶ್ವರ ದೇಗುಲದ ಐತಿಹಾಸಿಕ ಹಿನ್ನೆಲೆ, ಸಪ್ತಮಾತೃಕೆಯರ ಬಗ್ಗೆ ಅರ್ಚಕರಿಂದ ಮಾಹಿತಿ ಪಡೆದ ಅವರು, ದೇಗುಲದಲ್ಲೇ ಅರ್ಧ ತಾಸಿಗೂ ಹೆಚ್ಚು ಸಮಯ ಕಳೆದಿದ್ದಾರೆ.