ಚಾಮರಾಜನಗರ: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಕರೆಯುವ ಗುರುರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ನಗರದಲ್ಲಿ ಸರಳವಾಗಿ ಆಚರಿಸಲಾಯಿತು.
ಗಡಿಜಿಲ್ಲೆಯಲ್ಲಿ ರಾಘವೇಂದ್ರ ಸ್ವಾಮಿಗಳ ಸರಳ ಆರಾಧನೆ
ಚಾಮರಾಜನಗರದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸರಳವಾಗಿ ಗುರುರಾಯರ ಆರಾಧನೆ ನಡೆಯಿತು.
ಗುರುರಾಯರ ಆರಾಧನೆ
ರಾಯರ ಮಠದ ಆವರಣದಲ್ಲೇ ಉತ್ಸವ ನಡೆಸಿ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಿ ಕೊರೊನಾ ಮಹಾಮಾರಿ ದೂರವಾಗಲೆಂದು ಪ್ರಾರ್ಥಿಸಲಾಯಿತು. ಬೆಳಗ್ಗೆಯಿಂದಲೇ ವಿಪ್ರ ಮಹಿಳೆಯರು ಲೋಕ ಕಲ್ಯಾಣಾರ್ಥವಾಗಿ ಭಜನೆಗಳನ್ನು ಮಾಡಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಅದ್ಧೂರಿತನಕ್ಕೆ ಈ ಬಾರಿ ಕಡಿವಾಣ ಹಾಕಲಾಗಿದೆ. ಜೊತೆಗೆ, ಪ್ರತಿವರ್ಷವೂ ನಡೆಸುತ್ತಿದ್ದ ಅನ್ನ ಸಂತರ್ಪಣೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ.
Last Updated : Aug 6, 2020, 7:50 PM IST