ಕೊಳ್ಳೇಗಾಲ: ಲಾಕ್ ಡೌನ್ ರಿಯಾಯಿತಿ ನೀಡಿ ರೈತರಿಗಾಗಿ ಸರ್ಕಾರ ಮುಡಿಗುಂಡ ರೇಷ್ಮೆ ಮಾರುಕಟ್ಟೆ ತೆರೆದು ವ್ಯಾಪಾರ ವಹಿವಾಟು ಪ್ರಾರಂಭಿಸಿದೆ. ಆದರೆ ಇಲ್ಲಿನ ಗ್ರಾಮದ ಜನರಿಗೆ ಕೊರೊನಾ ಸೋಂಕು ಹರಡುವ ಆತಂಕ ಕಾಣಿಸಿಕೊಂಡಿದೆ.
ರೇಷ್ಮೆ ಮಾರುಕಟ್ಟೆ ಪ್ರಾರಂಭ: ಕೊಳ್ಳೇಗಾಲ ಗ್ರಾಮಸ್ಥರಿಗೆ ಕೊರೊನಾ ಭೀತಿ - ಕೊರೊನಾ ವೈರಸ್
ಪ್ರತಿ ನಿತ್ಯ ಕೊಳ್ಳೇಗಾಲ ರೇಷ್ಮೆ ಮಾರುಕಟ್ಟೆಗೆ ಮಂಡ್ಯ, ಮಳವಳ್ಳಿ ಹಾಗೂ ರಾಮನಗರ ಭಾಗಗಳಿಂದ ರೇಷ್ಮೆ ಗೂಡು ಮಾರಾಟಕ್ಕೆ ನೂರಾರು ರೈತರು ಆಗಮಿಸುತ್ತಿದ್ದು, ಇದ್ದರಿಂದ ಕೋವಿಡ್-19 ಮುಕ್ತ ಚಾಮರಾಜನಗರ ಜಿಲ್ಲೆಗೆ ಸೊಂಕು ಹರಡುವುದೇನೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
ಕೊರೊನಾ ಭಯದಿಂದ ಗ್ರಾಮಸ್ಥರು ಹಾಗೂ ರೀಲರ್ಸ್ಗಳು ಮಾರುಕಟ್ಟೆ ವಹಿವಾಟಿನ ತಡೆಗೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಸೋಂಕು ಇರುವ ವ್ಯಕ್ತಿ ಮಾರುಕಟ್ಟೆ ಪ್ರವೇಶಿಸಿದರೆ ದೊಡ್ಡ ಅನಾಹುತವಾಗುತ್ತದೆ. ಈ ಸಮಸ್ಯೆ ನಮ್ಮ ಕಣ್ಣ್ಮುದೆಯೇ ಇದ್ದು ಜಿಲ್ಲಾಡಳಿತ ಸೂಕ್ಷ್ಮವಾಗಿ ಪರಿಗಣಿಸಬೇಕು. ಮಾರುಕಟ್ಟೆಯನ್ನು ಲಾಕ್ ಡೌನ್ ಮುಗಿಯುವವರೆಗೂ ಮುಚ್ಚಬೇಕು ಎಂದು ರೀಲರ್ಸ್ ಶ್ರೀಧರ್ ಆಗ್ರಹಸಿದ್ದಾರೆ.
ತೆರೆದ ಮಾರುಕಟ್ಟೆಯಿಂದ ನಮ್ಮ ಗ್ರಾಮದ ನಿವಾಸಿಗಳು ಭಯದಿಂದ ಬದುಕುತ್ತಿದ್ದಾರೆ. ಗ್ರಾಮದ ಜನರು ಕೂಡ ಕೂಲಿಗಾಗಿ ಇಲ್ಲಿಗೆ ಬರುತ್ತಾರೆ. ಸಾಮಾಜಿಕ ಅಂತರವಂತು ದುಸ್ಥರವಾಗಿದ್ದು ಮಾಸ್ಕ್ ಬಳಕೆಯಲ್ಲೂ ಸಹ ಅರ್ಧಕರ್ಧ ಮಂದಿ ದೂರ ಉಳಿದಿದ್ದಾರೆ ಎಂದು ಗ್ರಾಮಸ್ಥ ಮೂರ್ತಿ ಮಾಹಿತಿ ನೀಡಿದರು.