ಕರ್ನಾಟಕ

karnataka

ETV Bharat / state

ರಾತ್ರಿ ಸಾವು, ಬೆಳಗ್ಗೆ ವ್ಯಕ್ತಿಗೆ ಮರುಜೀವ! ಶವ ಮೇಲಕ್ಕೆ ಎಸೆಯುವ ಭಕ್ತ ಸಮೂಹ

ಹಿಂದೂಗಳಿಗೆ ಹಬ್ಬಗಳಂದ್ರೆ ಸಂಭ್ರಮ, ಸಡಗರ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಅನೇಕ ಬಗೆಯ ವಿಶಿಷ್ಠ ಹಬ್ಬಗಳನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಪ್ರಸಿದ್ಧಿ, ವೈಶಿಷ್ಟ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆಯುತ್ತಿರುವ ಹಬ್ಬವೊಂದು ಎಲ್ಲರನ್ನೂ ರೋಮಾಂಚನಗೊಳಿಸಿದೆ.

sigamaramma festival celebration in Chamarajanagar, Died man again live in sigamaramma festival in Chamarajanagar, sigamaramma festival celebration, sigamaramma festival celebration news, ಚಾಮರಾಜನಗರದಲ್ಲಿ ಸೀಗಮಾರಮ್ಮ ಹಬ್ಬ ಆಚರಣೆ, ಚಾಮರಾಜನಗರದಲ್ಲಿ ಸೀಗಮಾರಮ್ಮ ಹಬ್ಬದಲ್ಲಿ ಮತ್ತೆ ಬದುಕಿ ಬರುವ ಮೃತ ವ್ಯಕ್ತಿ, ಸಿಗಮಾರಮ್ಮ ಹಬ್ಬ ಆಚರಣೆ, ಸಿಗಮಾರಮ್ಮ ಹಬ್ಬದ ಸಂಭ್ರಮಾಚರಣೆ ಸುದ್ದಿ,
sigamaramma festival celebration in Chamarajanagar, Died man again live in sigamaramma festival in Chamarajanagar, sigamaramma festival celebration, sigamaramma festival celebration news, ಚಾಮರಾಜನಗರದಲ್ಲಿ ಸೀಗಮಾರಮ್ಮ ಹಬ್ಬ ಆಚರಣೆ, ಚಾಮರಾಜನಗರದಲ್ಲಿ ಸೀಗಮಾರಮ್ಮ ಹಬ್ಬದಲ್ಲಿ ಮತ್ತೆ ಬದುಕಿ ಬರುವ ಮೃತ ವ್ಯಕ್ತಿ, ಸಿಗಮಾರಮ್ಮ ಹಬ್ಬ ಆಚರಣೆ, ಸಿಗಮಾರಮ್ಮ ಹಬ್ಬದ ಸಂಭ್ರಮಾಚರಣೆ ಸುದ್ದಿ,

By

Published : May 10, 2022, 11:45 AM IST

Updated : May 12, 2022, 5:26 PM IST

ಚಾಮರಾಜನಗರ: ಸೀಗಮಾರಮ್ಮನ ಜಾತ್ರೆಯಲ್ಲಿ ವ್ಯಕ್ತಿಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿ 9 ತಾಸಿನ ಬಳಿಕ ಮತ್ತೆ ಬದುಕಿ ಬರುವ ವಿಶೇಷ ಕಲ್ಪನೆ ಇದೆ. ಇದು ಅಚ್ಚರಿಯೆನಿಸಿದರೂ ಸತ್ಯ. ಕಳೆದ ತಿಂಗಳ 24ರಂದು ಇಲ್ಲಿನ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ನಿನ್ನೆ ತಡರಾತ್ರಿ ಇಂಥದ್ದೊಂದು ವಿಶಿಷ್ಟ ಆಚರಣೆ ನಡೆಯಿತು.

ಶವ ಮೇಲಕ್ಕೆ ಎಸೆಯುವ ಭಕ್ತ ಸಮೂಹ

ಸೀಗಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಐದು ಮಂದಿಯ ತಂಡವು ಅಲ್ಲಿದ್ದ ಬಾವಿಯೊಂದಕ್ಕೆ ಪೂಜೆ ಸಲ್ಲಿಸುತ್ತದೆ. ಬಳಿಕ ತಾಮ್ರದ ಕೊಡದಲ್ಲಿ ನೀರನ್ನು ಕುಣಿಯುತ್ತಾ ತರುವ ವೇಳೆ ದೇವಿಯ ಮುಖವಾಡ ಮೆರವಣಿಗೆ, ಹೆಬ್ರ ಬಡಿದು ಬರುವ ತಂಡಕ್ಕೆ ಎದುರಾಗುತ್ತದೆ.

ಇದನ್ನೂ ಓದಿ:ಅಬ್ಬಬ್ಬಾ ಇದೆಂಥಾ ಹಬ್ಬ! 6 ತಾಸು ಉಸಿರು ನಿಂತ ಬಳಿಕವೂ ಮತ್ತೆ ಬದುಕಿ ಬರ್ತಾರಂತೆ!

ಈ ಸಂದರ್ಭದಲ್ಲಿ 'ಕುರಿಸಿದ್ದ ನಾಯಕ' ಎಂಬುವರ ಮೇಲೆ ಅರ್ಚಕರು ಮಂತ್ರಾಕ್ಷತೆ ಎಸೆದು ಅವರ ಎದೆ ಮೇಲೆ ಕಾಲಿಡುತ್ತಿದ್ದಂತೆ ಆ ವ್ಯಕ್ತಿ ಪ್ರಜ್ಞೆ ಕಳೆದುಕೊಂಡು ಬೀಳುವರು. ಇದನ್ನೇ ಬಲಿ ಎಂದು ಕರೆಯುತ್ತಿದ್ದು, ಆ ವ್ಯಕ್ತಿ ಮೃತಪಟ್ಟಿರುತ್ತಾನೆ ಎಂಬುದು ಜನರ ನಂಬಿಕೆ.

ಶವ ಮೇಲಕ್ಕೆ ಎಸೆಯುವ ಭಕ್ತ ಸಮೂಹ

ಆತನನ್ನು ದೇವರ ಮುಂದಿರುವ ಬಲಿ ಮನೆ ಎಂಬಲ್ಲಿ 9 ತಾಸು ಇಟ್ಟಿರುತ್ತಾರೆ. ಮೃತ ವ್ಯಕ್ತಿಯ ಮೈತುಂಬಾ ಅರಿಶಿನದಿಂದ ಲೇಪಿಸಲಾಗಿರುತ್ತದೆ. ಈ ವೇಳೆ ಆತನ ಉಸಿರಾಟವೂ ನಿಂತಿರುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಇಂದು ಬೆಳಗ್ಗಿನ ಜಾವ 5ರ ಸುಮಾರಿಗೆ ಶವದ ಮೆರವಣಿಗೆ ನಡೆಸಿ ನಾಲ್ವರು ಆತನನ್ನು ಮೇಲಕ್ಕೆ ತೂರಿಕೊಂಡು ಮೆರವಣಿಗೆ ನಡೆಸುತ್ತಾರೆ. ಬಳಿಕ ಆತನ ದೇಹವನ್ನು ದೇವಾಲಯದತ್ತ ತಂದಿಟ್ಟಾಗ ಅರ್ಚಕರು ತೀರ್ಥ ಪ್ರೋಕ್ಷಿಸಿ ಮರುಜೀವ ನೀಡುತ್ತಾರೆ.

ಬದುಕಿ ಬಂದ ಕುರಿಸಿದ್ದ ನಾಯಕ

ಪ್ರತಿ 3 ವರ್ಷಕ್ಕೊಮ್ಮೆ ಗ್ರಾಮದೇವತೆ ಹಬ್ಬ ನಡೆಯುತ್ತದೆ. ಆದ್ರೆ, ಕೆಲ ಕಾರಣಗಳಿಂದ ಆಚರಣೆ ಇತ್ತೀಚೆಗೆ ನಿಂತು ಹೋಗಿತ್ತು. ಇದೀಗ 19 ವರ್ಷದ ಬಳಿಕ ಆಚರಣೆ ಮತ್ತೆ ನಡೆದಿದೆ. ಈ ಗ್ರಾಮದೇವತೆ ಹಬ್ಬ ಒಂದು ತಿಂಗಳಕಾಲ ನಡೆಯುತ್ತದೆ.

ಈ ದಿನಗಳಲ್ಲಿ ಸೀಗೆಮಾರಮ್ಮನ ಒಕ್ಕಲಿನವರು ಯಾರೊಬ್ಬರೂ ಮಾಂಸಾಹಾರ ಸೇವಿಸದೇ, ಹೋಟೆಲ್​ಗಳಲ್ಲಿ ತಿನ್ನದೇ, ಒಗ್ಗರಣೆ ಹಾಕಿದ ಆಹಾರ ಸೇವಿಸದೇ ಕಠಿಣ ಕಟ್ಟುಪಾಡಿನಿಂದ ಆಚರಣೆ ನಡೆಸುತ್ತಾರೆ. ಅದೇನೇ ಇರಲಿ, 8-9 ತಾಸು ಮೃತಪಟ್ಟಿದ್ದ ವ್ಯಕ್ತಿ ಮತ್ತೆ ಮರಳಿ ಜೀವ ಪಡೆಯುವುದು ವಿಚಿತ್ರ ಹಾಗೂ ನಂಬಿಕೆಗೆ ನಿಲುಕದ ವಿಶಿಷ್ಟ ಆಚರಣೆ!.

Last Updated : May 12, 2022, 5:26 PM IST

ABOUT THE AUTHOR

...view details