ಚಾಮರಾಜನಗರ:ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಥಳೀಯ ಮುಖಂಡರೊಟ್ಟಿಗೆ ಜಂಟಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಈ ಹಿಂದೆ ಡಿಕೆಶಿ ಸಿಂಗಲ್ ಟೂರ್ ಪ್ಲಾನ್ ಮಾಡಿಕೊಂಡಿದ್ದರಿಂದ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು. ಸಿದ್ದರಾಮಯ್ಯ ತಾಕೀತಿನಿಂದ ಇಂದು ಚಾಮರಾಜನಗರದಲ್ಲಿ ಹಾಗೂ ನಾಳೆ ಮೈಸೂರಿನಲ್ಲಿ ಇಬ್ಬರು ನಾಯಕರು ಪೂರ್ವಭಾವಿ ಸಿದ್ಧತೆಗಾಗಿ ಇಬ್ಬರೂ ನಾಯಕರು ಸಭೆ ನಡೆಸುವರು.