ಚಾಮರಾಜನಗರ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದಿನಿಂದ ರಾಜ್ಯದಲ್ಲಿ ಆರಂಭವಾಗಿದೆ. ಯಾತ್ರೆ ಹಿನ್ನೆಲೆಯಲ್ಲಿ ಆಗಮಿಸಿದ ರಾಗಾ ಅವರನ್ನು ಡಿಕೆಶಿಗಿಂತ ಮೊದಲೇ ಸಿದ್ದರಾಮಯ್ಯ ತೆರಳಿ ಸ್ವಾಗತಿಸಿದ್ದಾರೆ.
ಡಿಕೆಶಿಗೂ ಮುನ್ನ ಮಾರ್ಗ ಮಧ್ಯದಲ್ಲೇ ರಾಹುಲ್ಗೆ ಸ್ವಾಗತ ಕೋರಿದ ಸಿದ್ದರಾಮಯ್ಯ - dk shivakumar
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರವೇಶಿಸಿದ ರಾಹುಲ್ ಗಾಂಧಿ ಅವರನ್ನು ಮಾರ್ಗ ಮಧ್ಯದಲ್ಲೆ ಸ್ವಾಗತಿಸಿದ ಸಿದ್ದರಾಮಯ್ಯ, ಅವರೊಟ್ಟಿಗೆ ಖಾಸಗಿ ಹೋಟೆಲ್ವೊಂದಕ್ಕೆ ತೆರಳಿ ಉಪಹಾರವನ್ನು ಸೇವಿಸಿದರು.
ರಾಹುಲ್ ಗಾಂಧಿಯೊಂದಿಗೆ ಉಪಹಾರ ಮಾಡಿದ ಸಿದ್ದರಾಮಯ್ಯ
ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಬಳಿ ರಾಹುಲ್ ಗಾಂಧಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅದಕ್ಕೂ ಮೊದಲೇ ದಾರಿ ಮಧ್ಯ ಸಿದ್ದರಾಮಯ್ಯ ರಾಹುಲ್ಗೆ ಸ್ವಾಗತ ಕೋರಿ ಅವರೊಂದಿಗೆ ಖಾಸಗಿ ರೆಸಾರ್ಟ್ವೊಂದರಲ್ಲಿ ತಿಂಡಿ ಸೇವಿಸಿದ್ದಾರೆ. ಇತ್ತ ವೇದಿಕೆ ಕಾರ್ಯಕ್ರಮದ ಸಿದ್ಧತೆಯನ್ನು ಡಿಕೆಶಿ ನೋಡಿಕೊಳ್ಳುತ್ತಿದ್ದು, ಈ ನಡುವೆ ಸಿದ್ದರಾಮಯ್ಯ ರಾಗಾರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ:ಬಂಡೀಪುರ ಮೂಲಕ ರಾಜ್ಯಕ್ಕೆ ರಾಹುಲ್ ಎಂಟ್ರಿ: ರಾಜ್ಯ ಕಾಂಗ್ರೆಸ್ ನಾಯಕರಿಂದ ಸ್ವಾಗತ