ಚಾಮರಾಜನಗರ: 5 ವರ್ಷ ಹೇಗೆ ಆಯಿತು ಎಂಬುದೇ ತಿಳಿಯಲಿಲ್ಲ, ನಾನು ಮತ್ತೆ 5 ವರ್ಷ ಅಧಿಕಾರಕ್ಕೆ ಬರುತ್ತೇನೆ ಎಂದುಕೊಂಡಿದ್ದೆ. ಆದರೆ, ಬಹಳ ಮಂದಿಯ ದ್ವೇಷ, ಅಸೂಯೆ, ಅಪಪ್ರಚಾರದಿಂದ ಅಧಿಕಾರಕ್ಕೆ ಬರಲಾಗಲಿಲ್ಲ ಹೀಗಾಗಿ ಮುಂದಿನ ಬಾರಿಯಾದರೂ ನಮ್ಮನ್ನು ಕೈ ಹಿಡಿಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದ್ವೇಷ, ಅಸೂಯೆ, ಅಪಪ್ರಚಾರದಿಂದ ಅಧಿಕಾರಕ್ಕೆ ಬರಲಾಗಲಿಲ್ಲ;ಸಿದ್ದರಾಮಯ್ಯ... - ರಾಯಣ್ಣ ಬ್ರಿಗೇಡ್
5 ವರ್ಷ ಹೇಗೆ ಆಯಿತು ಎಂಬುದೇ ತಿಳಿಯಲಿಲ್ಲ, ನಾನು ಮತ್ತೆ 5 ವರ್ಷ ಅಧಿಕಾರಕ್ಕೆ ಬರುತ್ತೇನೆ ಎಂದುಕೊಂಡಿದ್ದೆ. ಆದರೆ, ಬಹಳ ಮಂದಿಯ ದ್ವೇಷ, ಅಸೂಯೆ, ಅಪಪ್ರಚಾರದಿಂದ ಅಧಿಕಾರಕ್ಕೆ ಬರಲಾಗಲಿಲ್ಲ ಹೀಗಾಗಿ ಮುಂದಿನ ಬಾರಿಯಾದರೂ ನಮ್ಮನ್ನು ಕೈ ಹಿಡಿಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಬೀರೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು,ಧರ್ಮ ಒಡೆಯುತ್ತೇನೆಂದು, ಆ ಜಾತಿ-ಈ ಜಾತಿ ವಿರೋಧಿಯೆಂದು ಅಪಪ್ರಚಾರ ಮಾಡಿದರು. ಲಿಂಗಾಯತ ಧರ್ಮ ಒಡೆಯುತ್ತಿದ್ದಾನೆಂದು ಅಪಪ್ರಚಾರ ಮಾಡಿದಾಗ ಧರ್ಮ ಬೇಕೆಂದವರೇ ಸುಮ್ಮನಾದರೂ ಎಂದು ಸ್ವಪಕ್ಷಿಯವರ ವಿರುದ್ಧವೇ ಹರಿಹಾಯ್ದರು.
ಎಲ್ಲಾ ಜಾತಿಯವರಿಗೂ ಅನ್ನಭಾಗ್ಯ ನೀಡಿದೆ, ಎಲ್ಲಾ ಜಾತಿಯ ಮಕ್ಕಳಿಗೂ ಕ್ಷೀರಭಾಗ್ಯ, ಶೂ ಭಾಗ್ಯ ನೀಡಿದೆ. ವಿದ್ಯಾಸಿರಿ ಜಾರಿಗೆ ತಂದರೂ ಅಹಿಂದ ವರ್ಗಕ್ಕೆ ಮಾತ್ರ ಮಾಡಿದೆ ಎಂದು ಅಪಪ್ರಚಾರ ಮಾಡಿದರು ಎಂದರು.
ಮೀಸಲಾತಿ ರೂವಾರಿ : ಶ್ರೀಮಂತರ ಕೈಯಲ್ಲಿ ಅಧಿಕಾರವಿದ್ದರೇ ಬಡವರು ಶೋಷಿತರಾಗುತ್ತಾರೆಂದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರು ಸ್ಫರ್ಧಿಸುವ ಮೀಸಲಾತಿ ನೀಡಿದ್ದು ನಾವು, ಇದಕ್ಕೆ ನಾನೇ ರೂವಾರಿ ಎಂದರು.
ನರೇಂದ್ರ ಮೋದಿ ಅವರಿಗೆ ಓಟ್ ಹಾಕಿ, ಓಟ್ ಹಾಕಿ ಎನ್ನುವವರು ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ವರ್ಗಗಳಿಗೆ ಒಂದೂ ಸ್ಥಾನವನ್ನು ಕೊಟ್ಟಿಲ್ಲ.ರಾಯಣ್ಣ ಬ್ರಿಗೇಡ್ ಮಾಡಿಕೊಂಡು ಓಡಾಡಿದ ಗಿರಾಕಿಗಳು ಏನು ಮಾಡಿಲ್ಲ ಆದರೆ ನಾನು ನಂದಗಢ ,ಕಾಗಿನೆಲೆ ಅಭಿವೃದ್ಧಿ ಮಾಡಿದೆ ಎಂದು ಪರೋಕ್ಷವಾಗಿ ಈಶ್ವರಪ್ಪಗೆ ಟಾಂಗ್ ನೀಡಿದರು.