ಕರ್ನಾಟಕ

karnataka

ETV Bharat / state

ಕೊಳ್ಳೇಗಾಲಕ್ಕೆ ಸಿದ್ದರಾಮಯ್ಯ, ಡಿಕೆಶಿ ಭೇಟಿ: ಸ್ವಾಗತಿಸಲು ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರು - Siddaramaiah and D k shivakumar visits kollegala

ಪ್ರವಾಸಿ ಮಂದಿರಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬರುತ್ತಿದ್ದಂತೆ ಸ್ವಾಗತ ಕೋರಲು ಸ್ಥಳೀಯ ಮುಖಂಡರು ಮುಗಿಬಿದ್ದಿದ್ದರು.

siddaramaiah-and-d-k-shivakumar
ಸಿದ್ದರಾಮಯ್ಯ..ಡಿಕೆಶಿ ಭೇಟಿ

By

Published : Jan 2, 2022, 2:43 PM IST

ಕೊಳ್ಳೇಗಾಲ: ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಕೊಳ್ಳೇಗಾಲದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಕ್ಷದ ಇಬ್ಬರು ನಾಯಕರನ್ನು ಸ್ವಾಗತಿಸಲು ಕಾರ್ಯಕರ್ತರು ಮುಗಿಬಿದ್ದರು.

ಈ‌ ವೇಳೆ ಪಕ್ಷದ‌ ನಾಯಕರನ್ನು ಸನ್ಮಾನಿಸಲು ಪಕ್ಷದ ಕಾರ್ಯಕರ್ತರು ನಾ‌ ಮುಂದು, ತಾ ಮುಂದು ಎಂಬಂತೆ ದುಂಬಾಲು ಬಿದ್ದರು.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ನಡೆಯುವ ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆಗೆ ಮಾಜಿ ಸಚಿವ ಹೆಚ್.ಸಿ‌ ಮಹದೇವಪ್ಪ ಅವರನ್ನು ಆಹ್ವಾನಿಸಿದ್ದೀರಾ? ಎಂಬ ಪ್ರಶ್ನೆಗೆ ಸುದ್ದಿಗಾರರಿಗೆ‌ ಉತ್ತರಿಸಿದ ಅವರು, ಸಭೆ ಸಂಬಂಧ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ, ನಾನು ಹೆಚ್. ಸಿ ಮಹದೇವಪ್ಪ ಅವರನ್ನು ವೈಯಕ್ತಿಕವಾಗಿ ಕರೆದಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಓದಿ:ಹೊಸ ವರ್ಷಾಚರಣೆ ವೇಳೆ ಚಾಕು ಇರಿತ: ಕಲಬುರಗಿಯಲ್ಲಿ ಯುವಕ ಸಾವು

ABOUT THE AUTHOR

...view details