ಕರ್ನಾಟಕ

karnataka

ETV Bharat / state

ಪೊಲೀಸರ ಮೇಲೆ ಹಲ್ಲೆ ಸೇರಿ 8 ಪ್ರಕರಣಗಳ ಆರೋಪಿ ಸಿದ್ದರಾಜು ಅಂದರ್! - chamarajanagara accused siddaraju

8 ಪ್ರಕರಣಗಳ ಆರೋಪಿ ಸಿದ್ದರಾಜುನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

accused siddaraju arrested
ಆರೋಪಿ ಸಿದ್ದರಾಜು ಅರೆಸ್ಟ್

By

Published : Jun 3, 2022, 3:57 PM IST

ಚಾಮರಾಜನಗರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಸಿದ್ದರಾಮಯ್ಯರ ಬಳಿ ತೆರಳಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಬೇಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಸಿದ್ದರಾಜು ಬಂಧಿತ ಆರೋಪಿ. ಕಳೆದ 3-4 ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದ ಸಿದ್ದರಾಜುವಿನ ಮೇಲೆ ಜಾತಿನಿಂದನೆ, ಗುಂಪು ಹಲ್ಲೆ, ಸರ್ಕಾರದ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.

ಈತನ ವಿರುದ್ಧ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆ ಬಂಧಿಸಲು ತೆರಳಿದ್ದ ಬೇಗೂರು ಪಿಎಸ್ಐ, ಎಎಸ್ಐ, ಮೂವರು ಕಾನ್ಸ್‌ಟೇಬಲ್​ಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಸಿದ್ದರಾಜು ನೇರ ಮೇಕೆದಾಟು ಪಾದಯಾತ್ರೆಗೆ ಹೋಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ತೆರಳಿ ಎಸ್ಪಿಗೆ ಕರೆ ಮಾಡಿಸಿದ್ದ. ಲೇಡಿ ಪಿಎಸ್ಐಗೆ ಹಲ್ಲೆ ಮಾಡಿರುವುದು ಸೇರಿದಂತೆ ಈತನ ಪೂರ್ವಾಪರ ತಿಳಿದುಕೊಂಡ ಸಿದ್ದರಾಮಯ್ಯ ಹಲ್ಲೆ ಏಕೆ ಮಾಡಿದ್ದೀರಾ ಎಂದು ಬೈದು ಕಳುಹಿಸಿದ್ದರು. ಅದಾದ ನಂತರವೂ ತಲೆ ಮರೆಸಿಕೊಂಡಿದ್ದ ಈತನನ್ನು ಇಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಬೇಗೂರು ಪೊಲೀಸರು ಒಪ್ಪಿಸಿದ್ದಾರೆ.

ಇದನ್ನೂ ಓದಿ:ನಸುಕಿನ ಜಾವ ಸ್ನೇಹಿತೆಯೊಂದಿಗೆ ಬೈಕ್​ನಲ್ಲಿ ಪ್ರಯಾಣ​.. ಮರಕ್ಕೆ ಡಿಕ್ಕಿ ಹೊಡೆದು ಇಬ್ಬರೂ ಸಾವು!

ABOUT THE AUTHOR

...view details