ಕರ್ನಾಟಕ

karnataka

ETV Bharat / state

ಕಂಟೈನ್ಮೆಂಟ್ ಪ್ರದೇಶದ ಜಾನುವಾರುಗಳಿಗೆ ಮೇವು ಪೂರೈಕೆ - ಕಂಟೈನ್ಮೆಂಟ್ ಪ್ರದೇಶದ ಜಾನುವಾರುಗಳಿಗೆ ಮೇವು

ಗ್ರಾಮದ ಕಂಟೈನ್ಮೆಂಟ್ ನಿವಾಸಿಗಳ ಜಾನುವಾರುಗಳಿಗೆ ಸಬ್ ಇನ್ಸ್ ಪೆಕ್ಟರ್ ರಾಧಾ ಪಡಗೂರು ಅವರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ಮೇವು ವಿತರಿಸಿದರು.

SI Radha Padagur supplied forage livestock cantonment area
ಕಂಟೈನ್ಮೆಂಟ್ ಪ್ರದೇಶದ ಜಾನುವಾರುಗಳಿಗೆ ಮೇವು ಪೂರೈಸಿದ ಎಸ್​​ಐ ರಾಧಾ ಪಡಗೂರು

By

Published : Aug 6, 2020, 10:54 PM IST

Updated : Aug 6, 2020, 11:45 PM IST

ಗುಂಡ್ಲುಪೇಟೆ: ಶ್ಯಾನಾಡ್ರಹಳ್ಳಿ ಗ್ರಾಮದ ಕಂಟೈನ್ಮೆಂಟ್ ಪ್ರದೇಶಕ್ಕೆ ಮೇವು ವಿತರಣೆ ಮಾಡಲಾಯಿತು.

ಕಂಟೈನ್ಮೆಂಟ್ ಪ್ರದೇಶದ ಜಾನುವಾರುಗಳಿಗೆ ಮೇವು ಪೂರೈಕೆ

ಗ್ರಾಮದ ಕಂಟೈನ್ಮೆಂಟ್ ನಿವಾಸಿಗಳು ಜಾನುವಾರುಗಳಿಗೆ ಮೇವು ಇಲ್ಲದೇ ಸಮಸ್ಯೆ ಉಂಟಾಗಿರುವ ಬಗ್ಗೆ ಸಬ್​ ಇನ್ಸ್​ಪೆಕ್ಟರ್ ರಾಧಾ ಪಡಗೂರು ಅವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜಮೀನಿನಿಂದ ಮೇವು ತರಲು ಅವಕಾಶ ಮಾಡಿಕೊಡಿ, ಇಲ್ಲವೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮೇವಿನ ವ್ಯವಸ್ಥೆ ಮಾಡಿಕೊಡಿ ಎಂದು ಅಳಲು ತೋಡಿಕೊಂಡಿದ್ದರು.

ಇದಕ್ಕೆ ಸ್ಪಂದಿಸಿದ ಸಬ್ ಇನ್ಸ್ ಪೆಕ್ಟರ್ ರಾಧಾ, ಮೇವು ತರಿಸಿ ಕೊಡುವ ಭರವಸೆ ನೀಡಿದರು. ಅದರಂತೆ ಅವರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಇದಕ್ಕೆ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಪಂದಿಸಿ, ಪಡಗೂರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ಮೇವನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಮತ್ತು ಗ್ರಾಮ ಸಹಾಯಕರು ಹಾಜರಿದ್ದರು.

Last Updated : Aug 6, 2020, 11:45 PM IST

For All Latest Updates

ABOUT THE AUTHOR

...view details