ಕರ್ನಾಟಕ

karnataka

ETV Bharat / state

ಗಡಿಜಿಲ್ಲೆಯಲ್ಲಿ ಶ್ರಾವಣ ಸಂಭ್ರಮ: ದೇಗುಲಗಳಿಗೆ ಹರಿದು ಬಂದ ಭಕ್ತಸಾಗರ - ಚಾಮರಾಜನಗರ ನ್ಯೂಸ್

ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಚಾಮರಾಜನಗರ ತಾಲೂಕಿನ‌ ಹರಳು ಕೋಟೆ ಆಂಜನೇಯ, ಬಿದ್ದಾಂಜನೇಯ ದೇಗುಲ, ಜನಾರ್ದನಸ್ವಾಮಿ ದೇಗುಲ, ಕರಿವರದರಾಜನ ಬೆಟ್ಟದಲ್ಲಿ ಶ್ರಾವಣ ಹಬ್ಬದ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು.

ದೇಗುಲ

By

Published : Aug 3, 2019, 8:31 PM IST

ಚಾಮರಾಜನಗರ: ಮೊದಲನೇ ಶ್ರಾವಣ ಶನಿವಾರವಾದ್ದರಿಂದ ಜಿಲ್ಲಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ, ದೇವರಿಗೆ ವಿಶೇಷ ಅಲಂಕಾರ ನೆರವೇರಿತು. ದೇಗುಲಗಳಿಗೆ ಭಕ್ತಸಾಗರವೇ ಹರಿದುಬಂದಿದ್ದು ಕಂಡು ಬಂದಿತು.

ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಚಾಮರಾಜನಗರ ತಾಲೂಕಿನ‌ ಹರಳು ಕೋಟೆ ಆಂಜನೇಯ, ಬಿದ್ದಾಂಜನೇಯ ದೇಗುಲ, ಜನಾರ್ದನಸ್ವಾಮಿ ದೇಗುಲ, ಕರಿವರದರಾಜನ ಬೆಟ್ಟದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು.

ದೇಗುಲ

ಪ್ಲಾಸ್ಟಿಕ್ ಬ್ಯಾನ್: ಹಿಮಾಚ್ಛಾದಿತವಾದ ಗೋಪಾಲಸ್ವಾಮಿ ಬೆಟ್ಟದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನಡೆಯುವುದರಿಂದ ದೂರ ದೂರಿನಿಂದ ಭಕ್ತ ಜಾತ್ರೆಯೇ ಹರಿದುಬಂದಿತ್ತು. ಸರ್ಕಾರಿ ಬಸ್ ಗಳನ್ನು ಬಿಟ್ಟು ಖಾಸಗಿ ವಾಹನಗಳಿಗೆ ಬೆಟ್ಟ ಪ್ರವೇಶವನ್ನು ಕಟ್ಟುನಿಟ್ಟಾಗಿ ಅರಣ್ಯಾಧಿಕಾರಿಗಳು ನಿರ್ಬಂಧಿಸಿದ್ದರು.

ಬೆಟ್ಟದ ತಪ್ಪಲಿನಲ್ಲೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು, ತಿನಿಸುಗಳ ಪೊಟ್ಟಣಗಳನ್ನು ಪರಿಶೀಲಿಸಿ ಪ್ಲಾಸ್ಟಿಕ್​ನ್ನು ವಶಪಡಿಸಿಕೊಂಡು ಭಕ್ತಾದಿಗಳನ್ನು ಬಿಡುವ ಕಾರ್ಯಕ್ಕೆ ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಬಹುಪಾಲು ದೇಗುಲಗಳಲ್ಲಿ 2, 3 ನೇ ಶ್ರಾವಣ ಶನಿವಾರ ವಿಜೃಂಭಣೆಯಿಂದ ಮತ್ತು ವಿಶೇಷ ಪೂಜೆ ನಡೆಯುವುದರಿಂದ ಎಲ್ಲಾ ದೇಗುಲಗಳಿಗೂಎರಡನೇ ಶ್ರಾವಣ ಶನಿವಾರಭಕ್ತಸಾಗರವೇ ಹರಿದು ಬರಲಿದೆ.

ABOUT THE AUTHOR

...view details