ಚಾಮರಾಜನಗರ:ಅನಾರೋಗ್ಯದಿಂದ ನಿಧನರಾದ ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನಕ್ಕೆ ನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಪೊಲೀಸರು ಶ್ರದ್ಧಾಂಜಲಿ ಸಲ್ಲಿಸಿದರು.
ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನಕ್ಕೆ ಗಡಿಜಿಲ್ಲೆ ಪೊಲೀಸರ ಶ್ರದ್ಧಾಂಜಲಿ - ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ
ಚಾಮರಾಜನಗರದಲ್ಲಿ ಅನಾರೋಗ್ಯದಿಂದ ನಿಧನರಾದ ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನಕ್ಕೆ ನಗರದ ಪೊಲೀಸರು ಶ್ರದ್ಧಾಂಜಲಿ ಸಲ್ಲಿಸಿದರು.
![ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನಕ್ಕೆ ಗಡಿಜಿಲ್ಲೆ ಪೊಲೀಸರ ಶ್ರದ್ಧಾಂಜಲಿ ಪೊಲೀಸರ ಶ್ರದ್ಧಾಂಜಲಿ](https://etvbharatimages.akamaized.net/etvbharat/prod-images/768-512-6396499-thumbnail-3x2-ghvghv.jpg)
ಪೊಲೀಸರ ಶ್ರದ್ಧಾಂಜಲಿ
ಚರಣ್ ರೆಡ್ಡಿ ಅವರ ನಿಧನ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ಅವರ ಸೇವೆ ಇಲಾಖೆಗೆ ಅಗತ್ಯವಿತ್ತು. ಸಿಐಡಿ ವಿಭಾಗದಲ್ಲಿ ಅವರ ಕೈಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಹೇಳಿದರು.
ಚರಣ್ ರೆಡ್ಡಿ ನಿಧನಕ್ಕೆ ಗಡಿಜಿಲ್ಲೆ ಪೊಲೀಸರ ಶ್ರದ್ಧಾಂಜಲಿ
ಚರಣ್ ರೆಡ್ಡಿಯವರು1998, 99 ರಲ್ಲಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಅವಧಿಯಲ್ಲಿ 350 ಪೊಲೀಸರನ್ನು ಪಾರದರ್ಶಕವಾಗಿ ನೇಮಕ ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು.