ಚಾಮರಾಜನಗರ: ಇಂದು ಬೆಳಗ್ಗೆ 6 ಗಂಟೆಯಿಂದಲೇ ಎಡೆಬಿಡದೇ 4 ತಾಸಿಗೂ ಹೆಚ್ಚು ಕಾಲ ತುಂತುರು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಯಿತು.
ಚಾಮರಾಜನಗರದಲ್ಲಿ ನಿಲ್ಲದ ತುಂತುರು ಮಳೆ: ಜನಜೀವನ ಅಸ್ತವ್ಯಸ್ತ - Livelihood disruption from rain
ಚಾಮರಾಜನಗರದ ಜಿಲ್ಲೆಯಾದ್ಯಂತ ತುಂತುರು ಮಳೆಯಾಗುತ್ತಿದೆ. ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರ ದಿನನಿತ್ಯದ ಕೆಲಸಗಳಿಗೆ ಅಡಚಣೆ ಉಂಟಾಗಿದೆ.
shower-rain-in-the-chamarajanagar-district
ಚಾಮರಾಜನಗರ, ಸಂತೇಮರಹಳ್ಳಿ, ಯಳಂದೂರು, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್ಟಿ ಅರಣ್ಯ, ಕೆಗುಡಿ ಅರಣ್ಯ ಭಾಗದಲ್ಲೂ ಉತ್ತಮ ಮಳೆಯಾಗಿದೆ.
ಕೆಲವು ಭಾಗಗಳಲ್ಲಿ ಸೂರ್ಯಕಾಂತಿ ಕಾಯಿ ಕಚ್ಚಿದ್ದು, ಇದೇ ರೀತಿ ಮಳೆಯಾದರೇ ರೈತನ ಬೆಳೆ ನೆಲ ಕಚ್ಚಲಿದೆ. ಆದರೆ, ಹತ್ತಿ ಬೆಳೆಗಾರರಲ್ಲಿ ಮಳೆಯಿಂದ ಮಂದಹಾಸ ಮೂಡಿದೆ.