ಕೊಳ್ಳೇಗಾಲ :ಲಾಕ್‌ಡೌನ್ ಆದೇಶವಿದ್ದರೂ ನಿಗದಿತ ಸಮಯದಲ್ಲಿ ಏಕೆ ಅಂಗಡಿ ಮುಚ್ಚಿಲ್ಲ ಎಂದು ಪ್ರಶ್ನಿಸಿದ ಕರ್ತವ್ಯ ನಿರತ ಪಿಎಸ್‌ಐಗೆ, ಅಂಗಡಿ ಮಾಲೀಕ ಮನಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಅಂಗಡಿ ಮಾಲೀಕ.. - ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಲೀಕ
ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲಾಗಿರುವ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿರುವಾಗಲೇ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಆದೇಶದಂತೆ ವ್ಯಾಪಾರ,ವಹಿವಾಟಿಗೆ ರಾತ್ರಿ 7ರವರೆಗೆ ಮಾತ್ರ ಅವಕಾಶವಿದೆ.
ಕೊಳ್ಳೇಗಾಲ ಪಟ್ಟಣದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಶ್ರೀದೇವಿ ಕಲೆಕ್ಷನ್ ಬಟ್ಟೆ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ರೂಪೇಶ್‌ಗೆ ಅಂಗಡಿ ಮುಚ್ಚುವಂತೆ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ತಿಳಿಸಿದ್ದಾರೆ. ಇದಕ್ಕೆ ಕುಪಿತನಾದ ಮಾಲೀಕ ಮನಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲಾಗಿರುವ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿರುವಾಗಲೇ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಆದೇಶದಂತೆ ವ್ಯಾಪಾರ,ವಹಿವಾಟಿಗೆ ರಾತ್ರಿ 7ರವರೆಗೆ ಮಾತ್ರ ಅವಕಾಶವಿದೆ. ಆದರೆ, ಈ ಕಾನೂನು ಪಾಲಿಸದೆ 8 ಗಂಟೆವರೆಗೂ ಜನ ಸೇರಿ ವ್ಯಾಪಾರ ಮಾಡುತ್ತ ಕಾನೂನು ಉಲ್ಲಂಘನೆ ಮಾಡಲಾಗಿದೆ. ಈ ಕುರಿತು ಸ್ವತಃ ಪಿಎಸ್‌ಐ ರಾಜೇಂದ್ರ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿಯಾದ ಅಂಗಡಿ ಮಾಲೀಕ ರೂಪೇಶ್‌ನನ್ನು ಬಂಧಿಸಿದ್ದಾರೆ.